ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಸಡಿಲಿಕೆಯಾದ್ರೂ ಪ್ರಾಣಿಸಂಗ್ರಹಾಲಯದತ್ತ ಸುಳಿಯದ ಪ್ರವಾಸಿಗರು.. - rani chennamma park

ಇಲ್ಲಿಗೆ ಬಹುತೇಕ ಪ್ರೇಮಿಗಳು ಅಥವಾ ಗಂಡ ಹೆಂಡತಿಯರು ಬರುತ್ತಾರೆ. ಈ ಹಿಂದೆ ನಿತ್ಯವೂ 10 ಸಾವಿರಕ್ಕೂ ಅಧಿಕ ಕಲಕ್ಷನ್ ಆಗುತ್ತಿತ್ತು. ಆದ್ರೀಗ ಕೇವಲ ₹200ರಿಂದ ₹500ವರೆಗೆ ಕಲೆಕ್ಷನ್ ಆಗುತ್ತಿದೆ.

belgavi
ಉದ್ಯಾನವನಗಳತ್ತ ಮುಖ ಮಾಡದ ಪ್ರವಾಸಿಗರು

By

Published : Jun 14, 2020, 7:59 PM IST

ಬೆಳಗಾವಿ :ಲಾಕ್​ಡೌನ್ ತೆರವಾದ್ರೂ ಕೂಡ ಕೊರೊನಾ ವೈರಸ್ ಭೀತಿಯಿಂದಾಗಿ ಉದ್ಯಾನವನಗಳತ್ತ ಪ್ರವಾಸಿಗರು ಆಗಮಿಸ್ತಿಲ್ಲ. ಹಾಗಾಗಿ ಪಾರ್ಕ್‌ಗಳೆಲ್ಲವೂ ಈಗ ಬಿಕೋ ಎನ್ನುತ್ತಿವೆ.

ಉದ್ಯಾನವನಗಳತ್ತ ಮುಖ ಮಾಡದ ಪ್ರವಾಸಿಗರು

ನಗರದ ಹೊರವಲಯದಲ್ಲಿರುವ ಭೂತರಾಮನಟ್ಟಿಯ ಕಿತ್ತೂರ ರಾಣಿ ಚೆನ್ನಮ್ಮ ಕಿರು ಪ್ರಾಣಿ ಸಂಗ್ರಹಾಲಯ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿ. ಈ ಉದ್ಯಾನವನ ನಿತ್ಯವೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಆದರೀಗ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಕಿತ್ತೂರ ರಾಣಿ ಚೆನ್ನಮ್ಮ ಕಿರು ಪ್ರಾಣಿಸಂಗ್ರಹಾಲಯ

ಉದ್ಯಾನವನದಲ್ಲಿ ಮೊಸಳೆ, ಜಿಂಕೆ, ಕೃಷ್ಣಮೃಗ, ಕಾಡುಕೋಣ, ನವಿಲು, ಉಷ್ಟ್ರಪಕ್ಷಿ, ಆಮೆ ಸೇರಿ ಇಪ್ಪತ್ತಕ್ಕೂ ಅಧಿಕ ಬಗೆಯ ಪ್ರಾಣಿ ಹಾಗೂ ಪಕ್ಷಿಗಳಿವೆ. ಸುತ್ತಲು ದಟ್ಟ ಅರಣ್ಯ ಪ್ರದೇಶ ಇರುವುದರಿಂದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಎರಡು ಹುಲಿ ಹಾಗೂ ಸಿಂಹಗಳನ್ನೂ ತರುವ ಯೋಜನೆಗೆ ಚಾಲನೆ ನೀಡಿದ್ದರು. ಆದರೆ, ಲಾಕ್​ಡೌನ್​ ಹಿನ್ನೆಲೆ ಎಲ್ಲ ಅಭಿವೃದ್ಧಿ ಕೆಲಸಗಳು‌ ಸ್ಥಗಿತವಾಗಿವೆ ಎನ್ನಲಾಗಿದೆ.

ಕಿತ್ತೂರ ರಾಣಿ ಚೆನ್ನಮ್ಮ ಕಿರು ಪ್ರಾಣಿಸಂಗ್ರಹಾಲಯ

ಚಿಕ್ಕಮಕ್ಕಳು ಹಾಗೂ ವಯೋವೃದ್ಧರಿಗೆ ಉದ್ಯಾನವನದಲ್ಲಿ ಪ್ರವೇಶ ನಿಷೇಧ ಹೇರಿರುವುದರಿಂದ ಜನರು ಉದ್ಯಾನವನಗಳತ್ತ ಮುಖ ಮಾಡುತ್ತಿಲ್ಲ ಎನ್ನಲಾಗುತ್ತಿದೆ.

ಕಿತ್ತೂರ ರಾಣಿ ಚೆನ್ನಮ್ಮ ಕಿರು ಪ್ರಾಣಿಸಂಗ್ರಹಾಲಯ
ಆದಾಯದಲ್ಲಿ ಇಳಿಕೆ :ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಿರುವ ಈ ಉದ್ಯಾವನಕ್ಕೆ ಈ ಹಿಂದೆ ನಿತ್ಯವೂ ಎರಡರಿಂದ ಮೂರು ಸಾವಿರದವರೆಗೂ ಜನರು ಬರುತ್ತಿದ್ದರು. ಆದ್ರೀಗ ನೂರು ಜನ ಕೂಡ ಪಾರ್ಕ್​ನತ್ತ ಬರುತ್ತಿಲ್ಲ. ಇಲ್ಲಿಗೆ ಬಹುತೇಕ ಪ್ರೇಮಿಗಳು ಅಥವಾ ಗಂಡ ಹೆಂಡತಿಯರು ಬರುತ್ತಾರೆ. ಈ ಹಿಂದೆ ನಿತ್ಯವೂ 10 ಸಾವಿರಕ್ಕೂ ಅಧಿಕ ಕಲಕ್ಷನ್ ಆಗುತ್ತಿತ್ತು. ಆದ್ರೀಗ ಕೇವಲ ₹200ರಿಂದ ₹500ವರೆಗೆ ಕಲೆಕ್ಷನ್ ಆಗುತ್ತಿದೆ. ಸದ್ಯ 30ಕ್ಕೂ ಅಧಿಕ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಿತ್ತೂರ ರಾಣಿ ಚೆನ್ನಮ್ಮ ಕಿರು ಪ್ರಾಣಿಸಂಗ್ರಹಾಲಯ

ABOUT THE AUTHOR

...view details