ಬೆಳಗಾವಿ:ಅನರ್ಹ ಶಾಸಕ ರಮೇಶ ಜಾರಕಿಹೊಳಿ ಉಪಚುನಾವಣೆಗೆ ತಯಾರಿ ಆರಂಭಿಸಿದ್ದು, ಗೋಕಾಕ ನಗರದಲ್ಲಿ ನಾಳೆ ಸಂಕಲ್ಪ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ.
ಗೋಕಾಕ ನಗರದಲ್ಲಿ ನಾಳೆ ಸಂಕಲ್ಪ ಸಮಾವೇಶ...'ಸಾಹುಕಾರ'ನ ಶಕ್ತಿ ಪ್ರದರ್ಶನ - ಸಂಕಲ್ಪ ಸಮಾವೇಶ
ನಾಳೆ ಗೋಕಾಕ ನಗರದಲ್ಲಿ ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ ಸಂಕಲ್ಪ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ರಮೇಶ ಅಳಿಯ ಅಂಬಿರಾವ್ ಪಾಟೀಲ್ ನೇತೃತ್ವದಲ್ಲಿ ರಮೇಶ ಮನೆ ಮುಂದೆ ಸಮಾವೇಶ ನಡೆಯಲಿದೆ.
![ಗೋಕಾಕ ನಗರದಲ್ಲಿ ನಾಳೆ ಸಂಕಲ್ಪ ಸಮಾವೇಶ...'ಸಾಹುಕಾರ'ನ ಶಕ್ತಿ ಪ್ರದರ್ಶನ](https://etvbharatimages.akamaized.net/etvbharat/prod-images/768-512-4354186-thumbnail-3x2-hasan.jpg)
Sankalpa Convention ,ಸಂಕಲ್ಪ ಸಮಾವೇಶ
ನಾಳೆ ಗೋಕಾಕ ನಗರದಲ್ಲಿ ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ ಸಂಕಲ್ಪ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ರಮೇಶ ಅಳಿಯ ಅಂಬಿರಾವ್ ಪಾಟೀಲ್ ನೇತೃತ್ವದಲ್ಲಿ ರಮೇಶ ಮನೆ ಮುಂದೆ ಸಮಾವೇಶ ನಡೆಯಲಿದೆ.
ಉಪಚುನಾವಣೆಗೆ ಗೋಕಾಕ ಸಾಹುಕಾರ್ ಶಕ್ತಿ ಪ್ರದರ್ಶನ ನಡೆಸಲು ಮುಂದಾಗಿದ್ದು, ಇಂದು ಸಂಜೆ ದೆಹಲಿಯಿಂದ ಬೆಳಗಾವಿಗೆ ರಮೇಶ ಜಾರಕಿಹೊಳಿ ಆಗಮಿಸುವ ಸಾಧ್ಯತೆ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೋಕಾಕ್ ಭೇಟಿ ನಂತರ ರಮೇಶ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.