ಕರ್ನಾಟಕ

karnataka

ETV Bharat / state

ಚುನಾವಣೆ ನಡೆದು ಒಂದೂವರೆ ವರ್ಷದ ಬಳಿಕ ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮತ ಎಣಿಕೆಗೆ ಸಿದ್ಧತೆ..! - ಈಟಿವಿ ಭಾರತ ಕನ್ನಡ

ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಕೇವಲ ಒಂದು ಮತದ ಅಂತರದಿಂದ ಸೋತಿದ್ದರು. ಈ ಹಿನ್ನೆಲೆ ಚುನಾವಣಾ ಅಧಿಕಾರಿಗಳಿಗೆ ಮರು ಮತ ಎಣಿಕೆಗೆ ಪರಾಭವಗೊಂಡ ಅಭ್ಯರ್ಥಿ ಮನವಿ ಸಲ್ಲಿಸಿದ್ದರಾದರೂ ಮತ ಎಣಿಕೆ ಮಾಡದೇ ಇದ್ದ ಹಿನ್ನೆಲೆ ಅಭ್ಯರ್ಥಿ ಕೋರ್ಟ್​ ಮೊರೆ ಹೋಗಿದ್ದು, ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮತ ಎಣಿಕೆ ಕಾರ್ಯ ನಡೆಯಲಿದೆ.

KN_BGM_01
ಹೆಬ್ಬಾಳ ಗ್ರಾಮ ಪಂಚಾಯಿತಿ

By

Published : Oct 20, 2022, 1:03 PM IST

ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯ ಮತವನ್ನ ಮರು ಎಣಿಕೆ ನಡೆಸಲು ಕಳೆದ ತಿಂಗಳ ನ್ಯಾಯಾಲಯ ಆದೇಶ ಹೊರಡಿಸಿದ್ದು, ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ಮರುಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ‌.

ಒಂದು ಮತ ಅಂತರದಿಂದ ಸೋತ ವ್ಯಕ್ತಿಯ ಪ್ರತಿಕ್ರಿಯೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಕಳೆದ 2020 ಡಿಸೆಂಬರ್ 23ರಂದು ಚುನಾವಣಾ ನಡೆದಿತ್ತು ಡಿ.30ರಂದು ಫಲಿತಾಂಶ ಪ್ರಕಟವಾಗಿತ್ತು. ಇನ್ನೂ ಈ ಚುನಾವಣೆ ಮತ ಎಣಿಕೆ ವೇಳೆ ಗೆದ್ದ ಅಭ್ಯರ್ಥಿಯೊಬ್ಬ 506 ಮತ ಪಡೆದಿದ್ದರು‌. ಪರಾಜಿತ ಅಭ್ಯರ್ಥಿ ರಾವಸಾಹೇಬ್​ ಪಾಟೀಲ್​ 505 ಮತಗಳನ್ನು ಪಡೆದು ಒಂದು ಮತಗಳಿಂದ ಸೋತಿದ್ದರು. ಬಳಿಕ ಚುನಾವಣಾ ಅಧಿಕಾರಿಗಳಿಗೆ ಮರು ಮತ ಎಣಿಕೆ ನಡೆಸುವಂತೆ ರಾವಸಾಹೇಬ ಮನವಿ ಮಾಡಿದ್ದರೂ ಅಧಿಕಾರಿಗಳು ಗೆದ್ದ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದರು.

ಇದರಿಂದ ಅಸಮಾಧಾನಗೊಂಡಿದ್ದ ರಾವಸಾಹೇಬ ಪಾಟೀಲ್​ ಕೋರ್ಟ್​ ಮೊರೆ ಹೋಗಿದ್ದು, ಇಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್.ರೊಟ್ಟೇರ್ ಸಮ್ಮುಖದಲ್ಲಿ ಮರು ಮತ ಎಣಿಕೆ ಕಾರ್ಯ ನಡೆಯಲಿದೆ.

ಇದನ್ನೂ ಓದಿ:ಎಫ್​ಐಆರ್​ ವರ್ಗಾಯಿಸಿದ ಬಳಿಕ ನ್ಯಾಯಾಲಯಕ್ಕೆ ತಿಳಿಸಿ: ಗೃಹ ಇಲಾಖೆಗೆ ಹೈಕೋರ್ಟ್​ ಸೂಚನೆ

ABOUT THE AUTHOR

...view details