ಬೆಳಗಾವಿ: ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ವೃದ್ಧ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋಕಾಕ್ ಹೊರವಲಯದಲ್ಲಿ ಸಂಭವಿಸಿದೆ.
ಬೈಕ್ಗೆ ಟಿಪ್ಪರ್ ಡಿಕ್ಕಿ: ಸ್ಥಳದಲ್ಲೇ ವೃದ್ಧ ದಂಪತಿ ಸಾವು - ಬೈಕಿಗೆ ಟಿಪ್ಪರ್ ಡಿಕ್ಕಿ ಸುದ್ದಿ
ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ವೃದ್ಧ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋಕಾಕ್ ಹೊರವಲಯದಲ್ಲಿ ಸಂಭವಿಸಿದೆ.
ಸ್ಥಳದಲ್ಲೇ ವೃದ್ಧ ದಂಪತಿ ಸಾವು
ಜಿಲ್ಲೆಯ ಗೋಕಾಕ್ ತಾಲೂಕಿನ ಲೊಳಸೂರು ಸೇತುವೆ ಬಳಿ ಅಪಘಾತ ಜರುಗಿದೆ. ಗೋಕಾಕ್ ತಾಲೂಕಿನ ಬಸಳಿಗುಂದಿ ಗ್ರಾಮದ ಮುರಸಿದ್ದಪ್ಪ ಪಾಟೀಲ್ (80), ಲಕ್ಕವ್ವ ಮುರಸಿದ್ದಪ್ಪ ಪಾಟೀಲ್ (70) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಬಸಳಿಗುಂದಿ ಗ್ರಾಮದಿಂದ ಗೋಕಾಕ್ ನಗರಕ್ಕೆ ಬರುವಾಗ ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಘಟನೆ ಜರುಗಿದೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.