ಬೆಳಗಾವಿ: ಕಸ ತುಂಬಿಕೊಂಡು ಹೊರಟಿದ್ದ ಟಿಪ್ಪರ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಪೌರ ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗಾಂಧಿನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಸ ವಿಲೇವಾರಿ ಮಾಡುವ ಟಿಪ್ಪರ್ ಡಿವೈಡರ್‌ಗೆ ಡಿಕ್ಕಿ: ಪೌರ ಕಾರ್ಮಿಕ ಸಾವು - Belgavi Latest Crime News
ಕಸ ವಿಲೇವಾರಿ ಮಾಡುವ ಟಿಪ್ಪರ್ ಲಾರಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪೌರ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಟಿಪ್ಪಿರ್ ಡಿವೈಡರ್ ಗೆ ಡಿಕ್ಕಿ: ಪೌರ ಕಾರ್ಮಿಕ ಸ್ಥಳದಲ್ಲೇ ಸಾವು
ಜ್ಯೋತಿ ನಗರದ ನಿವಾಸಿ ಜಿತೇಂದ್ರಬಾಬು ಢಾವಾಳೆ (35) ಸಾವನ್ನಪ್ಪಿದ ಪೌರ ಕಾರ್ಮಿಕ. ಕಸ ವಿಲೇವಾರಿ ಮಾಡುವ ಟಿಪ್ಪರ್ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದೊಳಗಿದ್ದ ವಾಹನ ಚಾಲಕ ಟಿಪ್ಪರ್ನಿಂದ ಕೆಳಗಡೆ ಬಿದ್ದಿದ್ದಾನೆ. ಈ ವೇಳೆ ಗಂಭೀರ ಸ್ಥಿತಿಯಲ್ಲಿದ್ದ ಜಿತೇಂದ್ರ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಜಿಲ್ಲಾಸ್ಪತ್ರೆಯ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.