ಕರ್ನಾಟಕ

karnataka

ETV Bharat / state

ಸಂಸತ್​ನಲ್ಲಿ ಭದ್ರತಾ ಲೋಪ: ಸ್ಪೀಕರ್ ಸೂಚನೆ ಮೇರೆಗೆ ಸುವರ್ಣಸೌಧದಲ್ಲೂ ಪೊಲೀಸ್​ ಬಿಗಿ ಭದ್ರತೆ - ಪೊಲೀಸ್ ಭದ್ರತೆ

ಲೋಕಸಭೆಯಲ್ಲಿ ಕಲಾಪ ವೇಳೆ ಉಂಟಾದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಪೊಲೀಸ್​ ಬಿಗಿ ಬಂದೋ ಬಸ್ತ್​ ಕೈಗೊಳ್ಳಲಾಗಿದೆ.

tight-security-at-suvarna-soudha-as-per-the-instructions-of-the-speaker
ಸಂಸತ್​ನಲ್ಲಿ ಭದ್ರತಾ ಲೋಪ : ಸ್ಪೀಕರ್ ಸೂಚನೆ ಮೇರೆಗೆ ಸುವರ್ಣಸೌಧದಲ್ಲೂ ಪೊಲೀಸ್​ ಬಿಗಿ ಭದ್ರತೆ

By ETV Bharat Karnataka Team

Published : Dec 13, 2023, 4:16 PM IST

Updated : Dec 13, 2023, 4:33 PM IST

ಸಂಸತ್​ನಲ್ಲಿ ಭದ್ರತಾ ಲೋಪ: ಸ್ಪೀಕರ್ ಸೂಚನೆ ಮೇರೆಗೆ ಸುವರ್ಣಸೌಧದಲ್ಲೂ ಪೊಲೀಸ್​ ಬಿಗಿ ಭದ್ರತೆ

ಬೆಳಗಾವಿ :ಸಂಸತ್​​ನಲ್ಲಿ ಭದ್ರತಾ ಲೋಪವಾಗಿರುವ ಹಿನ್ನೆಲೆ ಸುವರ್ಣಸೌಧದಲ್ಲೂ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಲೋಕಸಭೆಯಲ್ಲಿ ವ್ಯಕ್ತಿಯೊಬ್ಬ ಗ್ಯಾಲರಿಯಿಂದ ಕೆಳಗೆ ಜಿಗಿದು ಹಂಗಾಮಾ ಸೃಷ್ಟಿಸಿದ್ದ. ಹೀಗಾಗಿ ಸಂಸತ್​​ನಲ್ಲಿ ಭದ್ರತಾ ಲೋಪವಾದ ಕಾರಣ ಸುವರ್ಣಸೌಧದಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಂಸತ್ ಘಟನೆ ವರದಿಯಾದ ತಕ್ಷಣ ಸ್ಪೀಕರ್ ಯು.ಟಿ.ಖಾದರ್ ಮಾರ್ಷಲ್​​ಗಳ ಜೊತೆ ಸಭೆ ನಡೆಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.

ಚೀಫ್ ಮಾರ್ಷಲ್​ಗಳ ಸಭೆ ಕರೆದ ಸ್ಪೀಕರ್ ಯು.ಟಿ ಖಾದರ್, ಸದನ ಕಲಾಪದಲ್ಲಿ ಭದ್ರತೆ ಬಿಗಿ ಮಾಡಲು ಸೂಚಿಸಿದರು. ಲೋಕಸಭೆಯಲ್ಲಿ ಭದ್ರತಾ ಲೋಪದ ಬೆನ್ನಲ್ಲೇ ಸುವರ್ಣಸೌಧದಲ್ಲಿ ಸ್ಪೀಕರ್ ಖಾದರ್ ಭದ್ರತೆ ಪರಿಶೀಲನೆ ನಡೆಸಿದರು. ವಿಧಾನಸಭೆ ಸಭಾಂಗಣದ ಸುತ್ತ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಹಿನ್ನೆಲೆ ಸುವರ್ಣಸೌಧದಲ್ಲಿ ಪೊಲೀಸ್​ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ‌.‌ ಸುವರ್ಣಸೌಧದ ವಿಧಾನಸಭೆ ಪ್ರವೇಶ ದ್ವಾರದ ಮಹಡಿಯಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿದೆ. ಇಲ್ಲಿದ್ದ ಸಾರ್ವಜನಿಕರನ್ನು ಪೊಲೀಸರು ಹೊರಕ್ಕೆ ಕಳುಹಿಸಿದ್ದಾರೆ. ಮೊದಲ‌ ಮಹಡಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಇದರ ಜೊತೆಗೆ ಸುವರ್ಣಸೌಧ ಪ್ರವೇಶಿಸುವ ಸಾರ್ವಜನಿಕರನ್ನೂ ಹೆಚ್ಚಿನ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಕಳೆದ ಒಂದು ವಾರದಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿದೆ.

ಲೋಕಸಭೆಯಲ್ಲಿ ಭದ್ರತಾ ಲೋಪ, ನಾಲ್ವರ ಬಂಧನ :ಹೊಸ ಸಂಸತ್ತು ಭವನದಲ್ಲಿ ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಉಂಟಾಗಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಲೋಕಸಭೆಯಲ್ಲಿ ಸದಸ್ಯರು ಶೂನ್ಯ ವೇಳೆಯಲ್ಲಿ ಮಾತನಾಡುತ್ತಿದ್ದಾಗಲೇ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಸದನದೊಳಗೆ ಓಡಿ ಬಂದಿದ್ದಾರೆ. ಬಳಿಕ ಹಳದಿ ಬಣ್ಣದ ಸ್ಪ್ರೇ ಬಳಕೆ ಮಾಡಿ ಆತಂಕ ಸೃಷ್ಟಿಸಿದ್ದಾರೆ. ಇದೇ ವೇಳೆ ಸಂಸತ್ತಿನ ಆವರಣದ ಹೊರಗೂ ಇಬ್ಬರು ಘೋಷಣೆ ಕೂಗಿದ್ದಾರೆ. ಈ ಸಂಬಂಧ ಸದನಕ್ಕೆ ನುಗ್ಗಿದ ಇಬ್ಬರು ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ತಿಳಿಸಿದರು.

ಘಟನೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಸರ್ವ ಪಕ್ಷಗಳ ಸಂಸದರ ಸಭೆಯನ್ನು ಸ್ಪೀಕರ್ ಕರೆದಿದ್ದಾರೆ. ಈ ಹಿನ್ನೆಲೆ ಸಂಜೆ 4 ಗಂಟೆಯವರೆಗೆ ಕಲಾಪ ಮುಂದೂಡಲಾಗಿದೆ. ಈ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಿರ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ :ಲೋಕಸಭೆಯಲ್ಲಿ ಭದ್ರತಾ ಲೋಪ: ನಾಲ್ವರ ಬಂಧನ, ಆರೋಪಿಗಳ ಗುರುತು ಪತ್ತೆ

Last Updated : Dec 13, 2023, 4:33 PM IST

ABOUT THE AUTHOR

...view details