ಕರ್ನಾಟಕ

karnataka

ETV Bharat / state

​​​​​​​ಮೂರು‌ ಕುರಿಮರಿ ಕೊಂದ ಹುಲಿ: ಪ್ರಾಣಾಪಾಯದಿಂದ ರೈತ ಪಾರು - Tiger kills lambs in Belgaum

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ‌ ಗ್ರಾಮದ ಹೊರ ವಲಯದಲ್ಲಿ ಹುಲಿಯೊಂದು ಮೂರು ಕುರಿಮರಿಗಳನ್ನು ಕೊಂದು, ತಲೆ ಭಾಗ ತಿಂದು ಹಾಕಿದೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ರೈತ ದೇವಣ್ಣನ ಮೇಲೂ ಎರಗಿದ್ದು, ದಾಳಿಯಿಂದ ತಪ್ಪಿಸಿಕೊಂಡ ರೈತ ದೇವಣ್ಣನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಲಿ ದಾಳಿಯಿಂದ ಮೃತಪಟ್ಟ ಕುರಿಮರಿ

By

Published : Oct 16, 2019, 11:28 AM IST

Updated : Oct 16, 2019, 1:40 PM IST

ಬೆಳಗಾವಿ: ಹುಲಿಯೊಂದು ಮೂರು ಕುರಿಮರಿಗಳನ್ನು ಕೊಂದು, ತಲೆ ಭಾಗವನ್ನು ತಿಂದು ಹಾಕಿrಉವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ‌ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಹುಲಿ ದಾಳಿಯಿಂದ ಮೃತಪಟ್ಟ ಕುರಿಮರಿ

ಜಮೀನಿನಲ್ಲಿ ಮೇಯುತ್ತಿದ್ದ ಮೂರು ಕುರಿಮರಿಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದ ರೈತ ದೇವಣ್ಣ ಖನಗಾವಿ ಮೇಲೆ ಎರಗಿದೆ. ಅದೃಷ್ಟವಶಾತ್ ದೇವಣ್ಣ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುಲಿಯ ಅಟ್ಟಹಾಸಕ್ಕೆ ನಂದಗಡ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಗಾಯಾಳು ರೈತನ ಆರೋಗ್ಯ ವಿಚಾರಿಸಿದ್ದಾರೆ.ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Oct 16, 2019, 1:40 PM IST

ABOUT THE AUTHOR

...view details