ಕರ್ನಾಟಕ

karnataka

ETV Bharat / state

ಗೋವಾದಲ್ಲಿ ಭೀಕರ ಅಪಘಾತ: ಬೆಳಗಾವಿಯ ಮೂವರು ಯುವಕರ ದುರ್ಮರಣ - ಗೋವಾದಲ್ಲಿ ಕಾರು ಅಪಘಾತದಲ್ಲಿ ಬೆಳಗಾವಿ ಯುವಕರ ಸಾವು

ಗೋವಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರು ಸಾವಿಗೀಡಾಗಿದ್ದಾರೆ.

three-youth-from-belagavi-died-in-accident-at-goa
ಗೋವಾದಲ್ಲಿ ಭೀಕರ ಅಪಘಾತ.. ಬೆಳಗಾವಿಯ ಮೂವರು ಯುವಕರ ದುರ್ಮರಣ

By

Published : May 22, 2022, 10:15 AM IST

Updated : May 22, 2022, 12:05 PM IST

ಬೆಳಗಾವಿ:ಗೋವಾದ ಮಾಪ್ಸಾ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರು ದುರ್ಮರಣ ಹೊಂದಿದ್ದಾರೆ. ನಾಯರ್ ಅನಗೋಲ್ಕರ್ (28), ರೋಹನ್ ಗದಗ (26) ಹಾಗೂ ಸನ್ನಿ ಅವನೇಕರ್ (31) ಮೃತಪಟ್ಟಿರುವ ಯುವಕರೆಂದು ಗುರುತಿಸಲಾಗಿದೆ.

ಮಾಪ್ಸಾ ಜಿಲ್ಲೆಯ ಕುಛೇಲಿ ಬಳಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಾರು ಅಪಘಾತ ಸಂಭವಿಸಿತು. ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಪರಿಣಾಮ ದುರ್ಘಟನೆ ನಡೆದಿದೆ. ಈ ವೇಳೆ ಮೂವರು ಯುವಕರು ಸ್ಥಳದಲ್ಲೇ ಅಸುನೀಗಿದ್ದಾರೆ.

ಗೋವಾದಲ್ಲಿ ಭೀಕರ ಕಾರು ಅಪಘಾತ

ಘಟನೆಯಲ್ಲಿ ಮತ್ತೋರ್ವ ಪ್ರಯಾಣಿಕ ವಿಶಾಲ್ ಕರಜೇಕರ್‌ಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಗೋವಾದ ಜೆಎಂಸಿಗೆ ರವಾನಿಸಲಾಗಿದೆ‌ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ:ಬಾಗಲಕೋಟೆಯಲ್ಲಿ ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ

Last Updated : May 22, 2022, 12:05 PM IST

ABOUT THE AUTHOR

...view details