ಚಿಕ್ಕೋಡಿ:ಒಂದೇ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ನಡೆದಿದೆ.
ತ್ರಿಬಲ್ ರೈಡ್ ತಂದ ಸಾವು... ರಸ್ತೆ ಡಿವೈಡರ್ಗೆ ಬೈಕ್ಡಿಕ್ಕಿಯಾಗಿ ಮೂವರ ದುರ್ಮರಣ - ಮೂವರು ಯುವಕರು
ಒಂದೇ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ನಡೆದಿದೆ.
![ತ್ರಿಬಲ್ ರೈಡ್ ತಂದ ಸಾವು... ರಸ್ತೆ ಡಿವೈಡರ್ಗೆ ಬೈಕ್ಡಿಕ್ಕಿಯಾಗಿ ಮೂವರ ದುರ್ಮರಣ](https://etvbharatimages.akamaized.net/etvbharat/images/768-512-2584816-222-a50a07ff-6d59-4cbc-b603-d12d1818bf09.jpg)
ತ್ರಿಬಲ್ ರೈಡ್
ತ್ರಿಬಲ್ ರೈಡ್
ನಿಂಗಪ್ಪ ಮುಂಜಿ (22), ಪರಶುರಾಮ ಮಾದರ (20), ಮುಬಾರಕ್ ಪಠಾಣ (25) ಮೃತರು. ಇವರು ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಮೀರಜ್ ಪಟ್ಟಣದಿಂದ ಕೊಡಗನೂರು ಗ್ರಾಮಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದ್ದು, ಆಯಾ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಾವಿನಿಂದ ಕುಟುಂಬದ ಪಾಲಕರ ನೋವು, ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಮಹಾರಾಷ್ಟ್ರದ ಮಿರಜ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.