ಬೆಳಗಾವಿ: ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯ ವಿಭಜಕದ ಮೇಲಿಂದ ಹಾರಿದರೂ ಅಪಘಾತ ಪ್ರತಿರೋಧಕ ಏರ್ ಬಲೂನ್ನಿಂದ ಮೂವರ ಜೀವ ಉಳಿದಿದೆ.
ಮೂವರ ಪ್ರಾಣ ಉಳಿಸಿದ ಅಪಘಾತ ಪ್ರತಿರೋಧಕ ಏರ್ ಬಲೂನ್! - kannadanews
ಕಾರಿನ ಟೈರ್ ಬ್ಲಾಸ್ಟ್ ಆಗಿ ಕಾರೊಂದು ಹೆದ್ದಾರಿಯ ವಿಭಜಕದ ಮೇಲಿಂದ ಹಾರಿದರೂ ಅಪಘಾತ ಪ್ರತಿರೋಧಕ ಏರ್ ಬಲೂನ್ನಿಂದ ಮೂವರ ಜೀವ ಉಳಿದಿದೆ.
ಬೆಳಗಾವಿ ತಾಲೂಕಿನ ಹೆದ್ದಾರಿಗೆ ಅಂಟಿಕೊಂಡಿರುವ ಮುಕ್ತಿಮಠ ಬಳಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ವಿಭಜಕದ ಮೇಲಿಂದ ಹಾರಿ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತ ಪ್ರತಿರೋಧಕ ಏರ್ ಬಲೂನ್ನಿಂದಾಗಿ ಎಲ್ಲರೂ ಪಾರಾಗಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಆಯ ತಪ್ಪಿದ ಲಾರಿ ಹೆದ್ದಾರಿ ಕೆಳಗಡೆ ಉರುಳಿದೆ. ಲಾರಿಯಲ್ಲಿದ್ದ ಮಾವಿನಕಾಯಿ ತುಂಬಿದ ಪೆಟ್ಟಿಗೆಗಳು ರಸ್ತೆ ಮೇಲೆ ಬಿದ್ದಿದ್ದು, ಚಾಲಕ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರು ಬೆಂಗಳೂರು ಮೂಲದವರಾಗಿದ್ದು, ಅಪಘಾತ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.