ಕರ್ನಾಟಕ

karnataka

ETV Bharat / state

ಕುಡಚಿಯಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು - etv bharat kannada

ಕುಡಚಿ ಸಮೀಪ ಸರ್ಕಾರಿ ಬಸ್​ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ- ಮೂವರು ದ್ವಿಚಕ್ರ ವಾಹನ ಸವಾರರು ಸಾವು

three people died in road accident
ಕುಡಚಿಯಲ್ಲಿ ಭೀಕರ ರಸ್ತೆ:ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು

By

Published : Mar 18, 2023, 11:00 PM IST

Updated : Mar 18, 2023, 11:05 PM IST

ಚಿಕ್ಕೋಡಿ:ಕುಡಚಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿ ಮೂವರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಸಮೀಪದಲ್ಲಿ ಸರ್ಕಾರಿ ಬಸ್​ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಹಾಳಸಿರಬೂರ ಗ್ರಾಮದ ಭಗವಂತ ಶಿವರಾಯ ಕಾಂಬಳೆ (45), ವಿಶ್ವನಾಥ್ ಶ್ರೀಮತಿ ಕಾಂಬಳೆ (24), ಕುಮಾರ ಬಾಳಪ್ಪ ಕಾಂಬಳೆ (35) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಬಸ್​ ಡಿಕ್ಕಿಯಾದ ತೀವ್ರತೆಗೆ ಸ್ಥಳದಲ್ಲಿ ಮೂವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಯಿಂದ ಬಾಗಲಕೋಟೆ ಜಿಲ್ಲೆ ಬಾದಾಮಿಗೆ ಹಾರುಗೇರಿ ಮಾರ್ಗವಾಗಿ ಹೊರಟಿರುವ ಬಸ್​ಗೆ ಏಕಾಏಕಿ ಬೈಕ್ ಸವಾರರು ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ತರಬೇತಿ ವಿಮಾನ ಪತನ: ಮಹಿಳಾ ಟ್ರೈನಿ ಪೈಲಟ್ ಸೇರಿ ಇಬ್ಬರ ಸಾವು

ಮಂಗಳೂರಲ್ಲಿ ಸ್ಕೂಟರ್​ಗೆ ಟಿಪ್ಪರ್ ಡಿಕ್ಕಿಯಾಗಿ ಬಾಲಕಿ ಸೇರಿ ಇಬ್ಬರು ಸಾವು:ಮಂಗಳೂರು ನಗರದ ನಂತೂರಿನಲ್ಲಿ ಸ್ಕೂಟರ್​ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ನಗರದ ಸುಲ್ತಾನ್ ಬತ್ತೇರಿಯ ನಿವಾಸಿ ಸ್ಯಾಮುಯೆಲ್ ಜೇಸುದಾಸ್ (66) ಮತ್ತು ಅವರ ಸೊಸೆಯ ದೊಡ್ಡಮ್ಮನ ಮಗಳು ಭೂಮಿಕಾ (17) ಮೃತಪಟ್ಟವರು.

ಪಂಪ್​ವೆಲ್ ಕಡೆಯಿಂದ ನಂತೂರ್​ ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್​​ಗೆ ಡಿಕ್ಕಿ ಹೊಡೆದಿದೆ. ಲಾರಿಯೂ ಸ್ಕೂಟರ್ ಅನ್ನು ಅನತಿ ದೂರದವರೆಗೆ ಎಳೆದೊಯ್ದಿದೆ. ಇದೇ ವೇಳೆ ಇಬ್ಬರ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ‌. ಈ ಅಪಘಾತ ಉಂಟಾಗಿದ್ದ ಸ್ಥಳದಲ್ಲಿ ಕೆಲ ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿತ್ತು.

ಅಪಘಾತ ಸ್ಥಳಕ್ಕೆ ಎಸಿಪಿ ಗೀತಾ ಕುಲಕರ್ಣಿ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸದ್ಯ ಪೊಲೀಸರು ಆರೋಪಿ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ. ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರ್ ಸಾವು :ಪ್ರತ್ಯೇಕ ಘಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಕಾಶಿಮಠದ ಸಮೀಪ ಶನಿವಾರ ಮಧ್ಯಾಹ್ನ ಬೋರ್​ವೆಲ್ ಲಾರಿಯು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬ ತೀವ್ರ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಉಕ್ಕುಡದ ಅಲಂಗಾರು ನಿವಾಸಿ ರಂಜಿತ್ ಎಂಬ ಯುವಕ ಮೃತ ದುರ್ದೈವಿ. ಮತ್ತೋರ್ವ ಸವಾರ ನಿತಿನ್ (28) ತೀವ್ರವಾಗಿ ಗಾಯಗೊಂಡವ. ಈತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Last Updated : Mar 18, 2023, 11:05 PM IST

ABOUT THE AUTHOR

...view details