ಚಿಕ್ಕೋಡಿ: ನಿಪ್ಪಾಣಿ ಪಟ್ಟಣದ ಗೋಲ್ಡನ್ ಸ್ಟಾರ್ ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಿ, ಮೂವರು ಪುರುಷರನ್ನು ಬಂಧಿಸಿದ್ದಾರೆ.
ಹೊಟೇಲಿನಲ್ಲಿ ವೇಶ್ಯಾವಾಟಿಕೆ ದಂಧೆ: ಮೂವರ ಬಂಧನ - undefined
ಚಿಕ್ಕೋಡಿಯ ಗೋಲ್ಡನ್ ಸ್ಟಾರ್ ಹೊಟೇಲ್ ಮೇಲೆ ನಿಪ್ಪಾಣಿ ನಗರ ಪೊಲೀಸರು ದಾಳಿ ನಡೆಸಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಆರೋಪಿಗಳ ಬಂಧನ
ಭಾರತ ತುಕಾರಾಮ ಕಾಂಬಳೆ (58), ಶಶಿಕಾಂತ ಬಂಡಾ ಚೌಗಲಾ (34), ಸಚೀನ ದೊಂಡಿರಾಮ ಶಿಂದೆ (40) ಬಂಧಿತ ವ್ಯಕ್ತಿಗಳು. ಈ ವೇಳೆ 6 ಸಾವಿರ ರೂ ನಗದು, 19 ಮದ್ಯದ ಬಾಟಲಿಗಳು, ಮೊಬೈಲ್ ಮೊದಲಾದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಿಪ್ಪಾಣಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.