ಬೆಳಗಾವಿ: ರಸ್ತೆ ಕಾಮಗಾರಿ ವೇಳೆ ಭೂಕುಸಿತದಿಂದ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ದೇಸೂರು ಗ್ರಾಮದಲ್ಲಿ ಜರುಗಿದೆ.
ರಸ್ತೆ ಕಾಮಗಾರಿ ವೇಳೆ ಭೂಕುಸಿತ: ಜಾರ್ಖಂಡ್ ಮೂಲದ ಮೂವರು ಕಾರ್ಮಿಕರ ಸಾವು - undefined
ಖಾನಾಪುರ - ಬೆಳಗಾವಿ ಮಧ್ಯೆ ರಸ್ತೆ ಕಾಮಗಾರಿ ನಡೆಯುತ್ತಿದೆ. ದೇಸೂರು ಹೊರವಲಯದಲ್ಲಿ ಮೇಲ್ಸೆತುವೆ ಕಾರ್ಯ ಮಾಡುವ ವೇಳೆ ಭೂ ಕುಸಿತಗೊಂಡಿದೆ. ಮಣ್ಣಿನ ಗುಡ್ಡೆಯಲ್ಲಿ ಸಿಲುಕಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಜಾರ್ಖಾಂಡ್ ಮೂಲದ ಮೂವರು ಕಾರ್ಮಿಕರು ಸಾವು
ಮೃತ ಮೂವರೂ ಕಾರ್ಮಿಕರು ಜಾರ್ಖಾಂಡ್ ಮೂಲದವರು ಎಂದು ಗುರುತಿಸಲಾಗಿದೆ. ಅರ್ಜುನ ಸಿಂಗ್ (21), ದುರ್ಗೆಶ ಕುಮಾರ್ (22) ಮೃತರು. ಮಣ್ಣಿನಲ್ಲಿ ಸಿಲುಕಿರುವ ಇನ್ನೊಬ್ಬನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.
ಖಾನಾಪುರ - ಬೆಳಗಾವಿ ಮಧ್ಯೆ ರಸ್ತೆ ಕಾಮಗಾರಿ ನಡೆಯುತ್ತಿದೆ. ದೇಸೂರು ಹೊರವಲಯದಲ್ಲಿ ಮೇಲ್ಸೆತುವೆ ಕಾರ್ಯ ಮಾಡುವ ವೇಳೆ ಭೂ ಕುಸಿತಗೊಂಡಿದೆ. ಮಣ್ಣಿನ ಗುಡ್ಡೆಯಲ್ಲಿ ಸಿಲುಕಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.