ಬೆಳಗಾವಿ:ದೆಹಲಿಯ ತಬ್ಲಿಘಿ ನಂಜು ಗಡಿನಾಡಿಗೆ ವಕ್ಕರಿಸಿದ್ದು, ಮಕ್ಕಳಿಗೂ ಕೊರೊನಾ ಕಾಟ ಕೊಡ್ತಿದೆ. ಅಜ್ಜಿಯ ಮನೆಗೆ ರಜೆಗೆ ಬಂದ ಮೂವರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ.
ರಜೆಯ ಮಸ್ತಿಗೆ ಅಜ್ಜಿ ಮನೆಗೆ ಬಂದ ಮೂವರು ಮಕ್ಕಳಿಗೆ ಕೊರೊನಾ - ಕೊರೊನಾ
ಅಜ್ಜಿ ಮನೆಗೆ ರಜೆ ಕಳೆಯಲೆಂದು ಬಂದಿದ್ದ ಮೂವರು ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಬಾಲಕ, ಬಾಲಕಿಗೆ ಹಾಗೂ ಬೆಳಗಾವಿ ತಾಲೂಕಿನ ಓರ್ವ ಬಾಲಕಿಗೆ ಕೊರೊನಾ ಸೋಂಕು ತಗುಲಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಇಬ್ಬರು ಮಕ್ಕಳು ರಜೆ ಹಿನ್ನೆಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿರುವ ಅಜ್ಜಿ ಮನೆಗೆ ಬಂದಿದ್ದರು.
ಈ ಸೋಂಕಿತ ಮಕ್ಕಳು ಅಜ್ಜಿ ಮನೆಯ ಪಕ್ಕದಲ್ಲೇ ದೆಹಲಿಯ ಧರ್ಮಸಭೆಯಲ್ಲಿ ಪಾಲ್ಗೊಂಡು ಬಂದಿದ್ದ ಸೋಂಕಿತ ವ್ಯಕ್ತಿ p-293 ರ ಮನೆಯಿತ್ತು . ಹೀಗಾಗಿ ಮಕ್ಕಳು ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆ 9 ವರ್ಷದ ಬಾಲಕ ಹಾಗೂ 8 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ 75 ವರ್ಷದ ವೃದ್ಧೆಗೂ ಕೊರೊನಾ ಸೋಂಕು ತಟ್ಟಿದೆ. ನಿನ್ನೆ ಕೂಡ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 13 ವರ್ಷದ ಬಾಲಕಿಯಲ್ಲಿ ಕೊರೊನಾ ಪತ್ತೆಯಾಗಿತ್ತು. ಈಕೆ ಕೂಡ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದಳು. ಈ ಬಾಲಕಿ p- 364 ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು.