ಬೆಳಗಾವಿ: ನಗರದಲ್ಲಿ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 16 ಲಕ್ಷದ 48 ಸಾವಿರ ರೂ. ಬೆಲೆ ಬಾಳುವ ಬಂಗಾರದ ಆಭರಣಗಳು, ಬೆಳ್ಳಿ ಸೇರಿದಂತೆ ಇತರೆ ವಸ್ತುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ: ಮೂವರು ಮನೆಗಳ್ಳರ ಬಂಧನ, ಚಿನ್ನಾಭರಣ ಜಪ್ತಿ - belagavi theft case
ಎಪಿಎಂಸಿ ಠಾಣೆ ಪೊಲೀಸರು ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಬಂಧಿಸಿ, ಬೆಲೆ ಬಾಳುವ ಬಂಗಾರದ ಆಭರಣಗಳು, ಬೆಳ್ಳಿ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಕಳ್ಳತನ ಪ್ರಕರಣ
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು
ಅಪರಾಧ ವಿಭಾಗದ ಡಿಸಿಪಿ ಪಿವಿ ಸ್ನೇಹಾ ಮಾಹಿತಿ ನೀಡಿ, ಬಂಧಿತರು ಎಪಿಎಂಸಿ ಹಾಗೂ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದರು. 2021-22ರ ಸಾಲಿನಲ್ಲಿ ಕಳ್ಳತನ ಮಾಡಿದ್ದ 17 ಗ್ರಾಂ ಬಂಗಾರ, 17 ಕೆಜಿ 920 ಗ್ರಾಂ ಬೆಳ್ಳಿ ಹಾಗೂ 4 ಟಿವಿ ಸೆಟ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.