ಬೆಳಗಾವಿ:ರಾಜಧಾನಿ ಬೆಂಗಳೂರಿನ ಕೆ.ಜಿ. ಹಳ್ಳಿ, ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದವರು ದೇಶದ್ರೋಹಿಗಳು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯ. ಇಂದು ಇಡೀ ಜಗತ್ತು ಭಾರತದತ್ತ ಮುಖ ಮಾಡಿ ನೋಡುತ್ತಿದೆ. ದೇಶದಲ್ಲಿ ಕೊರೊನಾ ಮಹಾಮಾರಿ ಇದ್ದು, ಶಾಂತಿ ಕಾಪಾಡಬೇಕು. ದೇಶದ ಆರ್ಥಿಕತೆ ಸುಧಾರಿಸಲು ಪ್ರಧಾನಿ ಮೋದಿ ಕೆಲಸ ಮಾಡುವ ವೇಳೆ ಕೆಲ ದೇಶದ್ರೋಹಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.