ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರಿಗೆ ಟಿಕೆಟ್ ಘೋಷಣೆ

ಕಾಂಗ್ರೆಸ್​​ ಬೆಳಗಾವಿ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬೆಳಗಾವಿ ಉತ್ತರದಿಂದ ರಾಜು ಸೇಠ್, ಬೆಳಗಾವಿ ದಕ್ಷಿಣದಿಂದ ಪ್ರಭಾವತಿ ಚಾವಡಿ, ಅಥಣಿಯಿಂದ ಲಕ್ಷ್ಮಣ ಸವದಿ, ಅರಭಾವಿಯಿಂದ ಅರವಿಂದ ದಳವಾಯಿ, ರಾಯಬಾಗದಿಂದ ಮಹಾವೀರ ಮೋಹಿತೆ ಅವರಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ.

third-list-of-congress-candidates-ticket-announced-for-five-candidates-in-belgaum
ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರಿಗೆ ಟಿಕೆಟ್ ಘೋಷಣೆ

By

Published : Apr 15, 2023, 6:39 PM IST

ಬೆಳಗಾವಿ :ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಇದರಲ್ಲಿ ಬಾಕಿ ಉಳಿದಿದ್ದ ಬೆಳಗಾವಿ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಿಂದ ರಾಜು ಸೇಠ್, ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಪ್ರಭಾವತಿ ಚಾವಡಿ, ಅಥಣಿಯಿಂದ ಲಕ್ಷ್ಮಣ ಸವದಿ, ಅರಭಾವಿ ಕ್ಷೇತ್ರದಿಂದ ಅರವಿಂದ ದಳವಾಯಿ, ರಾಯಬಾಗ ಕ್ಷೇತ್ರದಿಂದ ಮಹಾವೀರ ಮೋಹಿತೆ ಎಂಬವರಿಗೆ ಕಾಂಗ್ರೆಸ್​ ಟಿಕೆಟ್ ಘೋಷಣೆ ಮಾಡಿದೆ.

ಅಥಣಿ ಕ್ಷೇತ್ರದಿಂದ ನಿನ್ನೆಯಷ್ಟೇ ಕಾಂಗ್ರೆಸ್ ಸೇರಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಟಿಕೆಟ್​ ನೀಡಲಾಗಿದೆ. ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿಗಳಾಗಿದ್ದ ಗಜಾನನ ಮಂಗಸೂಳಿ, ಧರೆಪ್ಪ ಠಕ್ಕನ್ನವರಗೆ ಟಿಕೆಟ್​ ಮಿಸ್ ಆಗಿದೆ‌. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮಾಜಿ ಶಾಸಕ ಫಿರೋಜ್ ಸೇಠ್ ಬದಲು ಅವರ ಸಹೋದರ ರಾಜು ಸೇಠ್​​ಗೆ ಕಾಂಗ್ರೆಸ್​ ಹೈಕಮಾಂಡ್​​ ಟಿಕೆಟ್​ ನೀಡಿದೆ. ಈ ಕ್ಷೇತ್ರದಿಂದ ಅಜೀಂ‌ ಪಟ್ವೇಗಾರ್ ಟಿಕೆಟ್​​ ಆಕಾಂಕ್ಷಿಯಾಗಿದ್ದರು.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನೇಕಾರ ಸಮುದಾಯದ ಪ್ರಭಾವತಿ ಮಾಸ್ತಮರಡಿಗೆ ಕಾಂಗ್ರೆಸ್​​ ಹೈಕಮಾಂಡ್ ಅವಕಾಶ ನೀಡಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ರಮೇಶ ಕುಡಚಿ, ಸರಳಾ ಸಾತ್ಪುತೆ, ರಮೇಶ ಗೋರಲ್ ಅವರಿಗೆ ಟಿಕೆಟ್ ನೀಡಿಲ್ಲ.

ರಾಯಬಾಗ ಕ್ಷೇತ್ರದಲ್ಲಿ ಟಿಕೆಟ್​​ ಸಿಗುವ ವಿಶ್ವಾಸದಲ್ಲಿದ್ದ ಐಎಎಸ್ ಅಧಿಕಾರಿ ಶಂಭು ಕಲ್ಲೋಳ್ಕರ್ ಬದಲು ಮಹಾವೀರ ಮೋಹಿತೆಗೆ ಕಾಂಗ್ರೆಸ್ ಮಣೆ ಹಾಕಿದೆ. ಇನ್ನು ಅರಭಾವಿ ಕ್ಷೇತ್ರದಿಂದ ಮತ್ತೆ ಅರವಿಂದ ದಳವಾಯಿಗೆ ಕಾಂಗ್ರೆಸ್​​ ಟಿಕೆಟ್ ನೀಡಿದೆ. ಭೀಮಪ್ಪ ಗಡಾದ, ಲಕ್ಕಣ್ಣ ಸವಸುದ್ದಿಗೆ ಟಿಕೆಟ್ ಕೈ ತಪ್ಪಿದೆ.

ಇದನ್ನೂ ಓದಿ :ಸಿಂಧನೂರು, ಮಾನ್ವಿಯಲ್ಲಿ ಮಾಜಿ ಶಾಸಕರಿಗೆ ಮಣೆ.. ದೇವದುರ್ಗದಲ್ಲಿ ಶ್ರೀದೇವಿಗೆ ಒಲಿದ ಟಿಕೆಟ್​

ABOUT THE AUTHOR

...view details