ಬೆಳಗಾವಿ: ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಮಹನೀಯರನ್ನು ಅವಮಾನ ಮಾಡುವವರು ಮಾನಸಿಕ ರೋಗಿಗಳು. ಇಂತವರ ಮೇಲೆ ದೇಶದ್ರೋಹದ ಪ್ರಕರಣ ಹಾಕಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದ ಆನಗೋಳದಲ್ಲಿ ಕನಕದಾಸ ಕಾಲೋನಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಭಾಷೆ, ಜಾತಿಗೆ ಸೀಮಿತವಾಗಿಲ್ಲ. ಇಡೀ ಮನಕುಲವನ್ನು ಉದ್ಧಾರ ಮಾಡಲು ದೇಶವನ್ನು ಸಬಲ ಮಾಡಲು ಕೆಲಸ ಮಾಡಿದ್ದಾರೆ ಎಂದರು.
ಕೆಲ ಕಿಡಗೇಡಿಗಳು ರಾಯಣ್ಣ, ಬಸವಣ್ಣನವರ ಪ್ರತಿಕೃತಿ ವಿರೂಪಗೊಳಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರು ಮರಾಠಿಗರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಕೆಲವೇ ಕೆಲವು ಕಿಡಿಗೇಡಿಗಳು ಹುಳಿ ಹಿಂಡುವ ಕೆಲಸವನ್ನು ಮಾಡ್ತಿದ್ದಾರೆ. ಅಂತವರನ್ನು ನಾವು ಬಿಡೋದಿಲ್ಲ. ರಾಯಣ್ಣನನ್ನು ಬ್ರಿಟಿಷರಿಗೆ ಯಾರು ಹಿಡಿದುಕೊಟ್ಟಿದ್ದಾರೋ ಆ ಕುಲಕ್ಕೆ ಸೇರಿದವರು ಇಂತಹ ಕೆಲಸ ಮಾಡುತ್ತಿದ್ದಾರೆ. ಅಂತರವನ್ನು ನಿಗ್ರಹ ಮಾಡ್ತೇವೆ ಎಂದು ಎಚ್ಚರಿಸಿದರು.