ಬೆಳಗಾವಿ: ಮೂರು ಸಾವಿರ ಶಾಖಾ ಮಠದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಖದೀಮರನ್ನು ತಡೆಯಲು ಮುಂದಾದ ಸ್ವಾಮೀಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಸಮೀಪದ ಹೊಸೂರು ಗ್ರಾಮದಲ್ಲಿ ನಡೆದಿದೆ.
ಮೂರು ಸಾವಿರ ಶಾಖಾ ಮಠಕ್ಕೆ ಕನ್ನ: ಸ್ವಾಮೀಜಿ ಮೇಲೆ ಖದೀಮರಿಂದ ಮಾರಣಾಂತಿಕ ಹಲ್ಲೆ
ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಕಳ್ಳರ ಗುಂಪೊಂದು ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿರುವ ಮೂರು ಸಾವಿರ ಶಾಖಾ ಮಠದಲ್ಲಿ ಕಳ್ಳತನ ಮಾಡಲು ಮುಂದಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಠದ ಗಂಗಾಧರ ಸ್ವಾಮೀಜಿ ಮೇಲೆ ದರೋಡೆಕೋರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಸ್ವಾಮೀಜಿ ಮೇಲೆ ಹಲ್ಲೆ ನಡೆಸಿದ ಖದೀಮರು
ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಕಳ್ಳರ ಗುಂಪೊಂದು ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಮೂರು ಸಾವಿರ ಶಾಖಾ ಮಠದಲ್ಲಿ ಕಳ್ಳತನ ಮಾಡಲು ಮುಂದಾಗಿತ್ತು. ಇದನ್ನು ಗಮನಿಸಿದ ಗಂಗಾಧರ ಸ್ವಾಮೀಜಿ ಕಳ್ಳತನ ತಡೆಯಲು ಮುಂದಾಗಿದ್ದರು. ಈ ವೇಳೆ ಖದೀಮರು ಸ್ವಾಮೀಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸ್ವಾಮೀಜಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : May 20, 2020, 11:42 AM IST