ಚಿಕ್ಕೋಡಿ:ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದಲ್ಲಿ ಖದೀಮರುಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಮೂರ್ತಿಯ ಬಂಗಾರ ಕದ್ದೊಯ್ದಿದ್ದಾರೆ.
ಲಕ್ಷ್ಮೀ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು... ಚಿನ್ನಾಭರಣದ ಜೊತೆಗೆ ಹುಂಡಿಯನ್ನು ಕದ್ದೊಯ್ದರು - ಚಿಕ್ಕೋಡಿ ಗೋಟೂರು ಗ್ರಾಮದ ಲಕ್ಷ್ಮೀ ದೇವಿ ದೇವಸ್ಥಾನ ಸುದ್ದಿ
ದೇವಸ್ಥಾನದ ಮೂರ್ತಿಯ ಬಂಗಾರ ಕದ್ದೊಯ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದಲ್ಲಿ ನಡೆದಿದೆ.
ಗೋಟೂರು ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ 10 ಗ್ರಾಂ ಬಂಗಾರದ ಮಂಗಳಸೂತ್ರ ಹಾಗೂ ಇನ್ನೊಂದು ಸಣ್ಣ ಬಂಗಾರದ ಮಂಗಳಸೂತ್ರ ಮತ್ತು ದೇವಿಗೆ ಹಾಕಿದ್ದ ಬೆಳ್ಳಿಯ ಎರಡು ಕಣ್ಣುಬೊಟ್ಟು, 4 ತೊಲ ಗುಂಡಗಡಿಗೆ, ಮೂಗುತಿ ದೋಚಿದ್ದಾರೆ. ಅಲ್ಲದೇ ಗರ್ಭಗುಡಿಯಲ್ಲಿದ್ದ ಕಾಣಿಕೆ ಡಬ್ಬಿಯನ್ನು ಸಹ ಖದೀಮರು ಕದ್ದೊಯ್ದಿದ್ದಾರೆ.
ಗ್ರಾಮದಲ್ಲಿ ಸಂಕೇಶ್ವರ ಪೊಲೀಸರು ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಕಳ್ಳರು ಹುಂಡಿ ಹೊತ್ತೊಯ್ಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆದರೆ, ಕಳಪೆ ಗುಣಮಟ್ಟದ ಸಿಸಿಟಿವಿ ಕ್ಯಾಮರಾದಿಂದ ಕಳ್ಳರ ಮುಖ ಅಸ್ಪಷ್ಟವಾಗಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.