ಕರ್ನಾಟಕ

karnataka

ETV Bharat / state

ಸುಮಲತಾ‌ ಅಂಬರೀಶ್ ಟಿಕೆಟ್ ಕೇಳೋದ್ರಲ್ಲಿ ತಪ್ಪಿಲ್ಲ: ಸಚಿವ ಎಂ ಬಿ ಪಾಟೀಲ್​ - ಬೆಳಗಾವಿ

ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಸುಮಲತಾ ಪರವಾಗಿ ಎಂ.ಬಿ ಪಾಟೀಲ್​ ಮಾತನಾಡಿದ್ದಾರೆ. ಜೊತೆಗೆ ಕಾಂಗ್ರೆಸ್​ಅನ್ನು ಟೀಕಿಸುತ್ತಿರುವ ಬಿಜಿಪಿ ನಾಯಕರಿಗೆ ಅವರು ತಿರುಗೇಟು ನೀಡಿದ್ದಾರೆ.

ಸುಮಲತಾ‌ ಅಂಬರೀಶ್​ಗೆ ಕಾಂಗ್ರೆಸ್​ನಿಂದ ಟಿಕಟ್​

By

Published : Mar 10, 2019, 11:40 AM IST

ಬೆಳಗಾವಿ: ಮೊನ್ನೆ ಕಾಂಗ್ರೆಸ್​ ಸುಮಲತಾ ಅವರಿಗೆ ಲೋಕಸಭೆ ಟಿಕೆಟ್​ ಅಸಾಧ್ಯ ಎಂದಿದ್ದ ಗೃಹ ಸಚಿವ ಎಂ ಬಿ ಪಾಟೀಲ್​ ಇಂದು ವರಸೆ ಬದಲಿಸಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ‌ ನಿಲ್ದಾಣದಲ್ಲಿ ಮಾತನಾಡಿದ ಅವರು,ಸುಮಲತಾ ಅಂಬರೀಶ್ ‌ಕಾಂಗ್ರೆಸ್ ನಿಂದ ಟಿಕೆಟ್ ಕೇಳೋದ್ರಲ್ಲಿ ತಪ್ಪೇನಿಲ್ಲ ಎಂದು ​ ಹೇಳಿದರು.

ಲೋಕಸಭೆ ಚುನಾವಣೆಗೆ ಮೈತ್ರಿ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಹಾಗೂ ಕ್ಷೇತ್ರ ಹಂಚಿಕೆಯ ಮಾತುಕತೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಸುಮಲತಾ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಗೃಹ ಸಚಿವರು ಹೇಳಿದ್ರು.

ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಾಮನ್ ಸೆನ್ಸ್ ಇಲ್ಲ ಎಂಬ ಬಿಜೆಪಿ‌ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿರುವ ಎಂ ಬಿ ಪಾಟೀಲ್​ ಅವರು ಬಿಎಸ್ ವೈ ಹಾಗೂ ಈಶ್ವರಪ್ಪನವರಿಗೆ ಕಾಮನ್​ ಸೆನ್ಸ್​ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹುತಾತ್ಮ ಯೋಧರ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಗರಿಗೆ ಮೊದಲು ಸಾಮಾನ್ಯ ಜ್ಞಾನವಿಲ್ಲ ಎಂದರು.

ABOUT THE AUTHOR

...view details