ಅಥಣಿ:ಮಾಜಿ ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸಿದ್ದೆ. ಇದೀಗ ಬೊಮ್ಮಾಯಿಯವರ ಸಂಪುಟದಲ್ಲಿ ನನಗಿಷ್ಟವಾದ ಮುಜರಾಯಿ ಖಾತೆಯನ್ನು ನೀಡಿದ್ದಾರೆ. ಈ ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಅಥಣಿ ಪಟ್ಟಣದ ಗಚ್ಚಿನ ಮಠದ ಶ್ರೀ ಶಿವಯೋಗಿಗಳ ದರ್ಶನ ಪಡೆದ ಬಳಿಕ ಸಚಿವೆ ಮಾಧ್ಯಮಗಳೊಂದಿಗೆ ಮಾತನಾಡಿದರು. ನನಗೆ ಮುಜರಾಯಿ ಖಾತೆ ನೀಡಿದ್ದಾರೆ. ನಾಳೆ ಬೆಂಗಳೂರಿಗೆ ತೆರಳಿ ಅಧಿಕಾರ ವಹಿಸಿಕೊಳ್ಳುತ್ತೇನೆ. ಶ್ರೀಶೈಲ, ಪಂಢರಪುರ, ಗುಡ್ಡಾಪೂರ ಇನ್ನಿತರ ಪ್ರದೇಶಗಳಿಗೆ ಕರ್ನಾಟಕದಿಂದ ಜನರು ದರ್ಶನಕ್ಕೆ ಹೋಗುತ್ತಾರೆ. ಆಯಾ ಪುಣ್ಯ ಕ್ಷೇತ್ರಗಳಲ್ಲಿ ರಾಜ್ಯದ ಭಕ್ತರಿಗೆ ತೊಂದರೆ ಉಂಟಾಗದಂತೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಚಿವೆ ಜೊಲ್ಲೆ ಭರವಸೆ ನೀಡಿದರು.
ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾತೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದೇನೆ. ಹಲವು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಪೋಷಣೆ ಮಾಸಾಚರಣೆ 26 ಸ್ಥಾನದಲ್ಲಿ ಇತ್ತು. ಸದ್ಯ ಒಂದನೇ ಸ್ಥಾನಕ್ಕೆ ಬಂದಿದ್ದೇವೆ. ಮಾತೃ ವಂದನಾ ಯೋಜನೆ 15 ಸ್ಥಾನದಲ್ಲಿ ಇತ್ತು. ಇವತ್ತು ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಹಳೆ ಖಾತೆಯಲ್ಲಿ ಹಲವಾರು ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಸದ್ಯ ಮುಜರಾಯಿ ಖಾತೆ ನೀಡಿದ್ದಾರೆ. ನನಗೆ ಈ ಖಾತೆಯಲ್ಲಿ ಸಂತೋಷ ಇದೆ ಎಂದರು.
ಧ್ವಜಾರೋಹಣ ವೇಳೆ ಗಲಾಟೆ ವಿಚಾರ: