ಕರ್ನಾಟಕ

karnataka

ETV Bharat / state

ಈಗಿನ ರಾಜಕಾರಣದಲ್ಲಿ ಪಕ್ಷ ನಿಷ್ಠೆ ಉಳಿದಿಲ್ಲ: ಕುಮಾರಸ್ವಾಮಿ - latest athani belagavi news

ಈಗಿನ ರಾಜಕಾರಣದಲ್ಲಿ ಯಾವ ಸನ್ನಿವೇಶದಲ್ಲಿ ಏನು ಆಗುತ್ತದೆಯೋ ಹೇಳಲಾಗದು. ಪಕ್ಷ ನಿಷ್ಠೆ ಈಗ ಉಳಿದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು.

latest kumaraswamy news
ಈಗಿನ ರಾಜಕಾರಣದಲ್ಲಿ ಪಕ್ಷ ನಿಷ್ಠೆ ಉಳಿದಿಲ್ಲ : ಮಾಜಿ ಸಿಎಂ ಕುಮಾರಸ್ವಾಮಿ

By

Published : Nov 30, 2019, 9:36 PM IST

ಅಥಣಿ: ಈಗಿನ ರಾಜಕಾರಣದಲ್ಲಿ ಯಾವ ಸನ್ನಿವೇಶದಲ್ಲಿ ಏನು ಆಗುತ್ತದೆಯೋ ಹೇಳಲಾಗದು. ಪಕ್ಷ ನಿಷ್ಠೆ ಈಗ ಉಳಿದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು.

ಈಗಿನ ರಾಜಕಾರಣದಲ್ಲಿ ಪಕ್ಷ ನಿಷ್ಠೆ ಉಳಿದಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಕಾಗವಾಡ ಉಪ ಚುಣಾವಣೆ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೇಟ್ಟಿ ಪರವಾಗಿ ಪ್ರಚಾರಕ್ಕೆ ಬಂದ ವೇಳೆ ಅಥಣಿ ಎಸ್ಎಂಎಸ್ ಕಾಲೇಜು ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹತ್ತಿರ ಈ ಕ್ಷಣದವರೆಗೆ 9 ತಾರೀಖಿನ ನಂತರದ ರಾಜಕೀಯ ಬೆಳವಣಿಗೆ ಬಗ್ಗೆ ಯಾರೂ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರ ಹೇಳಿಕೆ ಗಮನಿಸಿದ್ದೇನೆ. ಆದರೆ ಯಾವ ನಾಯಕರೂ ನನ್ನ ಸಂಪರ್ಕಕ್ಕೆ ಬಂದಿಲ್ಲ. ನಾನು ಈ ಮೊದಲೇ ಮಧ್ಯಂತರ ಚುನಾವಣೆಗಿಂತ ಜನರ ನೋವಿಗೆ ಸ್ಪಂದಿಸುವಂತೆ ಹೇಳಿದ್ದೇನೆ ಎಂದರು.

ನಮ್ಮದೇ ಸರ್ಕಾರ ಬರುತ್ತೆ ಅಂತಾ ಸಿದ್ದರಾಮಯ್ಯ ಕೂಡ ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಜನಸ್ಪಂದನೆ ನೋಡಿ ಅವರು ಸರ್ಕಾರ ಪತನ ಆಗೋದಿಲ್ಲ ಮಧ್ಯಂತರ ಚುನಾವಣೆ ನಡೆಯೋದಿಲ್ಲ ಅಂತಾ ಹೇಳಿರಬಹುದು. ನಾವೆಲ್ಲ ಈಗ ನಮ್ಮ ಆಸೆ, ಆಕಾಂಕ್ಷೆಗಳನ್ನು ಬಿಟ್ಟು ವಿಚಾರ ಮಾಡಬೇಕಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಆಯ್ಕೆಯಲ್ಲಿ ನಾನು ಎಡವಿಲ್ಲವೆಂದರು.

ಆಯಾ ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ರಮೇಶ್​ ಜಾರಕಿಹೊಳಿ ಕ್ಷೇತ್ರಕ್ಕೆ ಎಷ್ಟು ಕೊಟ್ಟಿದ್ದೇನೆ ಅಂತಾ ಕ್ಯಾಬಿನೆಟ್‌ನಲ್ಲೇ ಹೇಳಿದ್ದೇನೆ. ಅವರವರ ಕ್ಷೇತ್ರದ ಬೇಡಿಕೆಗನುಸಾರ ಅನುದಾನ ಕೊಟ್ಟಿದ್ದೇನೆ. ಯಾರಿಗೂ ನನ್ನ ಸರ್ಕಾರದಲ್ಲಿ ತಾರತಮ್ಯ ಮಾಡಿಲ್ಲ. ಮಹೇಶ ಕುಮಟಳ್ಳಿ ಕ್ಷೇತ್ರಕ್ಕೂ ಅನುದಾನ ಕೊಟ್ಟಿದ್ದೇನೆ. ಆದರೆ ಅವರು ರಮೇಶ್​ ಜಾರಕಿಹೊಳಿಗೆ ಬದ್ಧತೆ ತೋರಿಸಲು ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ABOUT THE AUTHOR

...view details