ಕರ್ನಾಟಕ

karnataka

ETV Bharat / state

ಸಿಎಂ ಮಾತಿಗೆ ಕಿಮ್ಮತ್ತಿಲ್ಲ: ವಾಟಾಳ್ ನಾಗರಾಜ್ ವಾಗ್ದಾಳಿ - ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್

ಬಿಜೆಪಿಯಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೆಡೆಗೆ ಅಸಮಾಧಾನ ಹೆಚ್ಚಾಗಿದ್ದು, ಅವರ ಮಾತಿಗೆ ಅಲ್ಲಿ ಯಾವುದೇ ಕಿಮ್ಮತ್ತಿಲ್ಲ. ಜೊತೆಗೆ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ತರುವಷ್ಟು ಶಕ್ತಿ ಬಿಜೆಪಿ ನಾಯಕರಲ್ಲಿ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.

ಸಿಎಂ ಮಾತಿಗೆ ಕಿಮ್ಮತ್ತಿಲ್ಲ: ವಾಟಾಳ್ ನಾಗರಾಜ್ ವಾಗ್ದಾಳಿ

By

Published : Nov 2, 2019, 4:59 PM IST

ಬೆಳಗಾವಿ:ಯಡಿಯೂರಪ್ಪ ಅವರಿಗೆ ಮೊದಲಿನ ಶಕ್ತಿ ಈಗಿಲ್ಲ. ಬಿಜೆಪಿ ಪಕ್ಷದಲ್ಲಿಯೇ ಅವರೆಡೆಗೆ ಅಸಮಾಧಾನ ಹೆಚ್ಚಾಗಿದ್ದು, ಯಡಿಯೂರಪ್ಪ ಅವರ ಮಾತಿಗೆ ಅಲ್ಲಿ ಯಾವುದೇ ಕಿಮ್ಮತ್ತಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ಸಿಎಂ ಮಾತಿಗೆ ಕಿಮ್ಮತ್ತಿಲ್ಲ: ವಾಟಾಳ್ ನಾಗರಾಜ್ ವಾಗ್ದಾಳಿ

ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರವಾಹ ಪರಿಹಾರ ವಿಳಂಬ ನೀತಿ ಖಂಡಿಸಿ ಹಮ್ಮಿಕೊಂಡಿದ್ದಪ್ರತಿಭಟನೆಯಲ್ಲಿವಾಟಾಳ್ ನಾಗರಾಜ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರವಾಹ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದಿಂದ ಪರಿಹಾರ ಹಣ ತರುವಷ್ಟು ಶಕ್ತಿ ಬಿಜೆಪಿ ನಾಯಕರಲ್ಲಿ ಇಲ್ಲ ಎಂದು ಕಿಡಿಕಾರಿದರು.

ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಮೋಸ ಮಾಡುತ್ತಿದೆ. ಸಿಎಂ ಕೇವಲ ಪರಿಹಾರ ಘೋಷಣೆ ಮಾಡುತ್ತಿದ್ದಾರೆ ಹೊರತು ನಿರಾಶ್ರಿತರಿಗೆ ಹಣ ಮಾತ್ರ ತಲುಪಿಸುತ್ತಿಲ್ಲ. ಇತ್ತ ಕೇಂದ್ರ ಸರ್ಕಾರವೂ ಪರಿಹಾರ ನೀಡುವಲ್ಲಿ ವಿಫಲವಾಗಿದ್ದು, ನರೇಂದ್ರ ಮೋದಿ ರಾಜೀನಾಮೆ ನೀಡಿ ಮನೆಗೆ ಹೋಗಲಿ. ಟಿಪ್ಪು ಜಯಂತಿ, ಕರ್ನಾಟಕ ಬಾವುಟದ ವಿಚಾರವಾಗಿ ಸರ್ಕಾರ ತಪ್ಪು ನಿರ್ಧಾರ ಕೈಗೊಳ್ಳುತ್ತಿದ್ದು, ಇದರ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ABOUT THE AUTHOR

...view details