ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಪ್ರಶ್ನಾತೀತ ನಾಯಕ, ಬದಲಾವಣೆ ಅಸಾಧ್ಯ : ಮಹೇಶ್ ಕುಮಟಳ್ಳಿ - ಸಿಎಂ ಯಡಿಯೂರಪ್ಪ

ಮಹಾರಾಷ್ಟ್ರದಿಂದ ನದಿಗೆ ನೀರು ಬರುತ್ತಿರುವುದರಿಂದ ಒಂದು ತಿಂಗಳು ಮೊದಲೇ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ನಾವು ಮಾತನಾಡಿಕೊಂಡು ನದಿಯಿಂದ ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ಶಾಸಕ ಕುಮಟಳ್ಳಿ ಹೇಳಿದರು.

Mahesh Kumatalli
ಅಥಣಿ ಶಾಸಕ ಮಹೇಶ್ ಕುಮಟಳ್ಳಿ

By

Published : May 30, 2021, 7:43 PM IST

Updated : May 30, 2021, 9:40 PM IST

ಅಥಣಿ :ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕ, ರಾಜ್ಯದಲ್ಲಿ ಸಿಎಂ ಬದಲಾವಣೆ ಅಸಾಧ್ಯ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

ಅಥಣಿ ಶಾಸಕ ಮಹೇಶ್ ಕುಮಟಳ್ಳಿ

ತಾಲೂಕಿನ ನಂದಗಾವ ಗ್ರಾಮದಲ್ಲಿ ಕರಿ ಮಸೂತಿ ಏತ ನೀರಾವರಿ ಕಾಲುವೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಕುಮಟಳ್ಳಿ ಮಾತನಾಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಆದರೆ, ಬಿಜೆಪಿ ಸರ್ಕಾರದ ಅವಧಿ ಮುಗಿಯುವವರೆಗೆ ಬಿಎಸ್​ವೈ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.

ವಾಡಿಕೆಯಂತೆ ನಾವು ಜೂನ್ ತಿಂಗಳಲ್ಲಿ ಕಾಲುವೆ ಪ್ರಾರಂಭ ಮಾಡಬೇಕು. ಆದರೆ, ದೇವರ ಅನುಗ್ರಹದಿಂದ ಈ ಬಾರಿ ಕೃಷ್ಣಾ ನದಿಯಲ್ಲಿ ನೀರಿದೆ. ಮಹಾರಾಷ್ಟ್ರದಿಂದ ನದಿಗೆ ನೀರು ಬರುತ್ತಿರುವುದರಿಂದ ಒಂದು ತಿಂಗಳು ಮೊದಲೇ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ನಾವು ಮಾತನಾಡಿಕೊಂಡು ನದಿಯಿಂದ ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಪೊಲೀಸರ ಕೈಗೆ ಸಿಗಬಾರದು ಅಂತಾ ಉಂಗುರ ನುಂಗಿದ ಕಳ್ಳ : ಮುಂದೇನಾಯ್ತು?

Last Updated : May 30, 2021, 9:40 PM IST

ABOUT THE AUTHOR

...view details