ಚಿಕ್ಕೋಡಿ: ಯಾರ್ಯಾರೋ ಚುನಾವಣೆಯಲ್ಲಿ ಬಂದು ನಾವು ಸ್ಟಾರ್ ಪ್ರಚಾರಕರು ಅಂತಾರೆ. ಆದ್ರೆ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.
ರಾಗಿಣಿ ನಟಿ ಅಷ್ಟೇ, ಅವರಿಗೂ ಬಿಜೆಪಿಗೂ ಸಂಬಂಧವಿಲ್ಲ: ಮಹಾಂತೇಶ ಕವಟಗಿಮಠ - ನಟಿ ರಾಗಿಣಿ
ಗಿಣಿ ಒಬ್ಬ ನಟಿ ಮಾತ್ರ. ಅವರು ಬಿಜೆಪಿಯವರಲ್ಲ. ಅವರಿಗೂ ಬಿಜೆಪಿಗೂ ಸಂಬಂಧ ಕಲ್ಪಿಸೋದು ಬೇಡ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

ಮಹಾಂತೇಶ ಕವಟಗಿಮಠ
ಮಹಾಂತೇಶ ಕವಟಗಿಮಠ
ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿ ಕೇಂದ್ರ ನೆರೆ ವೀಕ್ಷಣೆ ಬಳಿಕ ಸ್ಯಾಂಡಲ್ವುಡ್ ನಲ್ಲಿ ಡ್ರಗ್ ಮಾಫಿಯಾ ಕುರಿತು ಪ್ರತಿಕ್ರಿಯಿಸಿದ ಅವರು, ರಾಗಿಣಿ ಒಬ್ಬ ನಟಿ ಮಾತ್ರ. ಅವರು ಬಿಜೆಪಿಯವರಲ್ಲ. ಅವರಿಗೂ ಬಿಜೆಪಿಗೂ ಸಂಬಂಧ ಕಲ್ಪಿಸೋದು ಬೇಡ ಎಂದು ಹೇಳಿದರು.