ಬೆಳಗಾವಿ:ದಕ್ಷಿಣ ಭಾರತ ಭಾಗದಲ್ಲೂ ಖಾಸಗಿ ರೈಲು ಸಂಚಾರಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.
ದಕ್ಷಿಣ ಭಾರತದಲ್ಲೂ ಖಾಸಗಿ ರೈಲು ಸಂಚಾರಕ್ಕೆ ಅವಕಾಶ: ಸುರೇಶ್ ಅಂಗಡಿ - opportunity for private trains
ಈಗಾಗಲೇ ಉತ್ತರ ಭಾರತದಲ್ಲಿ ಖಾಸಗಿ ರೈಲು ಸಂಚಾರ ಆರಂಭಗೊಂಡಿದ್ದು, ದಕ್ಷಿಣ ಭಾರತದಲ್ಲಿಯೂ ಖಾಸಗಿ ರೈಲ್ವೆ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ದೆಹಲಿ- ಲಕ್ನೋ ಮಧ್ಯೆ ತೇಸಜ್ ಹೆಸರಿನ ಖಾಸಗಿ ರೈಲು ಸಂಚರಿಸುತ್ತಿದೆ. ಅದೇ ಮಾದರಿಯಲ್ಲಿ ದಕ್ಷಿಣ ಭಾರತದಲ್ಲೂ ಖಾಸಗಿ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆಸಕ್ತರು ಮುಂದೆ ಬಂದರೆ ಅಂಥವರಿಗೆ ರೈಲ್ವೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪ್ರವಾಹ ಸಂಬಂಧ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯ ನಾಯಕರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಪ್ರವಾಹದ ಸಂದರ್ಭದಲ್ಲಿ ಸಿಎಂ ಕಾರ್ಯ ಅತ್ಯುತ್ತಮವಾಗಿತ್ತು. ಆರಂಭಿಕವಾಗಿ 10 ಸಾವಿರ, ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕೇಂದ್ರ ಸಚಿವನಾಗಿ ಸಿಎಂ ಅವರನ್ನು ಅಭಿನಂದಿಸುತ್ತೇನೆ. ಕೇಂದ್ರ ಕೂಡ 1200 ಕೋಟಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. ಬರುವ ದಿನಗಳಲ್ಲಿ ಕೂಡ ಕೇಂದ್ರದಿಂದ ಹೆಚ್ಚಿನ ಪರಿಹಾರ ಬಿಡುಗಡೆ ಆಗಲಿದೆ ಎಂದು ಸುರೇಶ್ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದರು.