ಬೆಳಗಾವಿ:ವೈನ್ ಶಾಪ್ಗಳನ್ನು ತೆರೆಯುವಂತೆ ಕುಡುಕರಿಂದ ಈಗಲೂ ಕರೆಗಳು ಬರುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದಂಗಡಿ ಆರಂಭಿಸುವ ಬಗ್ಗೆ ಸರ್ಕಾರ ಹಾಗೂ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ. ಮದ್ಯದಂಗಡಿ ಆರಂಭದ ಕುರಿತಾಗಿ ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಿದೆ ಅಷ್ಟೇ. ಆದರೆ, ಮದ್ಯದಂಗಡಿ ಆರಂಭಿಸುವಂತೆ ಈಗಲೂ ನನಗೆ ಫೋನ್ ಕರೆಗಳು ಬರುತ್ತಿವೆ ಎಂದಿದ್ದಾರೆ.
ಸಚಿವ ಜಗದೀಶ್ ಶೆಟ್ಟರ್ಗೂ ಕುಡುಕರ ಕಾಟ... ಏನ್ ವಿಷ್ಯಾ ಅಂದರೆ!!!! - wine shop
ಲಾಕ್ಡೌನ್ ಹಿನ್ನೆಲೆ ರಾಜ್ಯದ ಎಲ್ಲ ಮದ್ಯದಂಗಡಿಗಳು ಬಂದ್ ಆಗಿವೆ. ಈ ಹಿನ್ನೆಲೆ ಮದ್ಯ ಸಿಗದೇ ಅನೇಕರು ಆತ್ನಹತ್ಯೆ ಮಾಡಿಕೊಂಡಿರುವ ಘಟನೆಗಳೂ ಸಹ ನಡೆದಿದೆ. ಈ ಮಧ್ಯೆ ವೈನ್ ಶಾಪ್ಗಳನ್ನು ತೆರೆಯುವಂತೆ ಕುಡುಕರಿಂದ ಈಗಲೂ ಕರೆಗಳು ಬರುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮದ್ಯದಂಗಡಿ ಆರಂಭದ ಕುರಿತಾಗಿ ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಿದೆ ಅಷ್ಟೇ. ಆದರೆ, ಮದ್ಯದಂಗಡಿ ಆರಂಭಿಸುವಂತೆ ಈಗಲೂ ನನಗೆ ಫೋನ್ ಕರೆಗಳು ಬರುತ್ತಿವೆ ಎಂದಿದ್ದಾರೆ.
ಏಪ್ರಿಲ್ 30ರ ವರೆಗೂ ತಾಳ್ಮೆಯಿಂದ ಇರುವಂತೆ ಮದ್ಯಪ್ರೀಯರಿಗೆ ಹೇಳಿದ್ದೇನೆ ಎಂದು ಸಚಿವ ಶೆಟ್ಟರ್ ಸ್ಪಷ್ಟ ಪಡಿಸಿದರು. ಬೆಳಗಾವಿ ಜಿಲ್ಲೆಯಲ್ಲಿ 17 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಕುಡಚಿಯಲ್ಲಿ 9, ಹಿರೇಬಾಗೇವಾಡಿ 6, ಬೆಳಗಾವಿ ನಗರದ ಕ್ಯಾಂಪ್ ನಲ್ಲಿ 1, ಬೆಳಗುಂದಿ ಗ್ರಾಮದಲ್ಲಿ ಓರ್ವನಿಗೆ ಕೊರೊನಾ ಸೋಂಕು ತಗುಲಿದೆ. ದೆಹಲಿ ಧರ್ಮಸಭೆಯಲ್ಲಿ ಪಾಲ್ಗೊಂಡವರು ಹಾಗೂ ಅವರ ಸಂಪರ್ಕ ಹೊಂದಿದವರಿಗೆ ಮಾತ್ರ ಸೋಂಕು ತಗುಲಿದೆ. ಕುಡುಚಿ, ಹಿರೇಬಾಗೇವಾಡಿ, ಬೆಳಗುಂದಿ, ಬೆಳಗಾವಿ ನಗರದ ಕೆಲ ಪ್ರದೇಶ ಸಂಪೂರ್ಣ ಸೀಲ್ ಡೌನ ಮಾಡಲಾಗಿದೆ.
ಸೋಂಕಿತರೊಂದಿಗೆ ಪ್ರಾಥಮಿಕವಾಗಿ ಸಂಪರ್ಕಕ್ಕೆ ಬಂದ 209, ಸೆಕೆಂಡರಿ ಕಾಂಟ್ಯಾಕ್ಟ್ ನ 259 ಜನರಿಗೆ ಹೋಮ್ ಕ್ವಾರಂಟೈನಲ್ಲಿ ಇರಿಸಲಾಗಿದೆ. ಐಸೋಲೇಷನ್ ವಾರ್ಡ್ನಲ್ಲಿ ಕೆಲಸ ನಿರ್ವಹಿಸಿದ್ದ ವೈದ್ಯರು, ನರ್ಸ್, ಅಟೆಂಡರ್ ಸೇರಿ 41 ಜನರ ಗಂಟಲು ದ್ರವ ತಪಾಸಣೆಗೆ ರವಾನಿಸಲಾಗಿದೆ. ದೆಹಲಿಯಿಂದ ಬಂದವರು ತಾವಾಗಿಯೇ ಮುಂದೆ ಬಂದು ಚಿಕಿತ್ಸೆ ಪಡೆಯಬೇಕು. ಇಲ್ಲವಾದ್ರೆ ಕಾನೂನಿನ ಅಡಿ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.