ಚಿಕ್ಕೋಡಿ:ಭಗವಾನ್ ಮಹಾವೀರ ತೀರ್ಥಂಕರ ಜೈನ ಮಂದಿರದ ಬಾಗಿಲಿನ ಬೀಗ ಮುರಿದು 2 ಕೆಜಿ ಬೆಳ್ಳಿ, 20 ಗ್ರಾಂ ಚಿನ್ನ, ಎರಡು ದಾನದ ಪೆಟ್ಟಿಗೆಗಳು ಸೇರಿ 2 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ನಡೆದಿದೆ.
ಜೈನ ಮಂದಿರದ ಬಾಗಿಲಿನ ಬೀಗ ಮುರಿದು ಕಳ್ಳತನ - theft latest news
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿರುವ ಭಗವಾನ್ ಮಹಾವೀರ ತೀರ್ಥಂಕರ ಜೈನ ಮಂದಿರದ ಬಾಗಿಲಿನ ಬೀಗ ಮುರಿದು 2 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.
ಜೈನ ಮಂದಿರದ ಬಾಗಿಲಿನ ಬೀಗ ಮುರಿದು ಕಳ್ಳತನ!
ಕಳವಾದ ವಸ್ತುಗಳಲ್ಲಿ ಭಗವಾನ್ ಮಹಾವೀರರ ಮೂರ್ತಿ ಮೇಲಿದ್ದ 1 ಕೆಜಿ ಬೆಳ್ಳಿಯ ಛತ್ತ, ಹಿಂಬದಿಯಲ್ಲಿದ್ದ 1 ಕೆಜಿ ತೂಕದ ಬೆಳ್ಳಿಯ ಭಾಮಂಡಲ, ಪದ್ಮಾವತಿ ದೇವರ ಕೊರಳಲಿದ್ದ ತಲಾ 10 ಗ್ರಾಂನ 2 ಚಿನ್ನದ ಮಂಗಳಸೂತ್ರ ಸೇರಿವೆ. ದಾನದ ಪೆಟ್ಟಿಗೆಯಲ್ಲಿ 20 ಸಾವಿರ ಹಣ ಇತ್ತು ಎಂದು ಅಂದಾಜಿಸಲಾಗಿದೆ. ಸದ್ಯ ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.