ಬೆಳಗಾವಿ:ಇಂದು ಬೆಳ್ಳಂಬೆಳಗ್ಗೆ ತಾಲೂಕಿನ ಹಲಗಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಅತ್ತಿವಾಡ ಗ್ರಾಮದ ಹೊರವಲಯದಲ್ಲಿರುವ ಸಾತೇರಿ ದೇವಸ್ಥಾನದಲ್ಲಿ ದೇವರ ಮೇಲಿನ ಆಭರಣಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ.
ಬೆಳಗಾವಿಯ ಎರಡು ದೇವಸ್ಥಾನಗಳಲ್ಲಿ ಆಭರಣ ಕದ್ದು ಖದೀಮರು ಪರಾರಿ - Burglary in Halga village of Belgaum taluk
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಮಹಾಲಕ್ಷ್ಮಿ ಮಂದಿರ ಹಾಗೂ ಅತ್ತಿವಾಡ ಗ್ರಾಮದ ಸಾತೇರಿ ದೇವಿ ಮಂದಿರದಲ್ಲಿ ದೇವರ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಪ್ರತ್ಯೇಕ ಘಟನೆಗಳು ನಡೆದಿವೆ.
ದೇವಸ್ಥಾನದಲ್ಲಿ ಕಳ್ಳತನ
ದೇವಿಯ ಮೂರ್ತಿಯ ಮೇಲೆ ತೊಡಿಸಿದ್ದ ಮಾಂಗಲ್ಯ ಸರ ಮತ್ತು ಮೂಗುತಿಯನ್ನು ಎಗರಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಎಂದಿನಂತೆ ಪೂಜಾರಿ ದೇವಸ್ಥಾನದ ಬಾಗಿಲು ತೆರೆಯಲು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಅರ್ಚಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಹಿರೇಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.