ಕರ್ನಾಟಕ

karnataka

ETV Bharat / state

ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಕಳ್ಳತನ ಆರೋಪ ; ಇಬ್ಬರು ಅಂದರ್​​! - belgavi theft case

ಕೊರಳಲ್ಲಿದ್ದ ಬಂಗಾರದ ಮಂಗಳಸೂತ್ರ, ಬಂಗಾರದ ಚೈನ್, ಬಂಗಾರದ ಬಳೆಗಳನ್ನು ಕದ್ದಿದ್ದಾರೆ. ಅಲ್ಲದೇ, ಶೋಭಾ ಅವರ ಪತಿ ಗುರುರಾವ ಕಾಥವಟೆ ಅವರ ತಲೆ ಜಜ್ಜಿ ಗಾಯಗೊಳಿಸಿದ್ದರು. ಅವರ ಕೊರಳಲ್ಲಿನ ಬಂಗಾರದ ಚೈನ್, ಕೈಬೆರಳಲ್ಲಿದ್ದ ಉಂಗುರ ಹಾಗೂ 25 ಸಾವಿರ ರೂ. ನಗದು ಖಸಿದು ಪರಾರಿಯಾಗಿದ್ದರು..

theft case of belgavi; 2 are arrested !
ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಕಳ್ಳತನ ಆರೋಪ; ಇಬ್ಬರು ಅಂದರ್​​!

By

Published : Dec 5, 2020, 8:41 AM IST

ಬೆಳಗಾವಿ: ವಾಶಿಂಗ್ ಮಷಿನ್ ರಿಪೇರಿ ನೆಪ ಹೇಳಿಕೊಂಡು ಬಂದಿದ್ದ ಇಬ್ಬರು, ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿ 3.20 ಲಕ್ಷ ರೂ.‌ ಮೌಲ್ಯದ ಚಿನ್ನಾಭರಣ ಕಳ್ಳತನ ಎಸಗಿರುವ ಆರೋಪದಡಿ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಕಂಗ್ರಾಳಿ ಕೆಎಚ್ ವಿಶಾಲ ಗಲ್ಲಿಯ ಮಾರುತಿ ಪರಶುರಾಮ ಜಾಧವ (26), ವೈಭವ ನಗರದ ಶುಭಂ ರಾಜು ಬಾತಖಂಡೆ (25) ಬಂಧಿತರು. ನ. 30 ರಂದು ರಾತ್ರಿ 9 ಗಂಟೆಗೆ ಶಿವಾಜಿ ನಗರದ ಶೋಭಾ ಗುರುರಾವ್ ಕಾಥವಟೆ ಎಂಬುವವರ ಮನೆಗೆ ಬಂಧಿತ ಇಬ್ಬರು ಆರೋಪಿಗಳು ವಾಶಿಂಗ್ ಮಷಿನ್ ರಿಪೇರಿ ಮಾಡುವ ನೆಪ ಮಾಡಿಕೊಂಡು ಬಂದಿದ್ದಾರೆ. ಬಳಿಕ ಶೋಭಾ ಅವರ ಬಾಯಿ ಮುಚ್ಚಿ ಅವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನೂ ಓದಿ:ಲಂಚ ಸ್ವೀಕರಿಸಿದ ಆರೋಪ ಸಾಬೀತು : ಗ್ರಾಮಲೆಕ್ಕಾಧಿಕಾರಿಗೆ 4 ವರ್ಷ ಜೈಲು

ಕೊರಳಲ್ಲಿದ್ದ ಬಂಗಾರದ ಮಂಗಳಸೂತ್ರ, ಬಂಗಾರದ ಚೈನ್, ಬಂಗಾರದ ಬಳೆಗಳನ್ನು ಕದ್ದಿದ್ದಾರೆ. ಅಲ್ಲದೇ, ಶೋಭಾ ಅವರ ಪತಿ ಗುರುರಾವ ಕಾಥವಟೆ ಅವರ ತಲೆ ಜಜ್ಜಿ ಗಾಯಗೊಳಿಸಿದ್ದರು. ಅವರ ಕೊರಳಲ್ಲಿನ ಬಂಗಾರದ ಚೈನ್, ಕೈಬೆರಳಲ್ಲಿದ್ದ ಉಂಗುರ ಹಾಗೂ 25 ಸಾವಿರ ರೂ. ನಗದು ಖಸಿದು ಪರಾರಿಯಾಗಿದ್ದರು.

ಸದ್ಯ ಬಂಧಿತರಿಂದ 3.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details