ಬೆಳಗಾವಿ: ಮಾರಕಾಸ್ತ್ರ ಸಹಿತ ಕಳ್ಳತನಕ್ಕಿಳಿಯುತ್ತಿರುವ ದರೋಡೆಕೋರರ ಗ್ಯಾಂಗ್ ಬಾರ್, ಕಿರಾಣಿ ಮಳಿಗೆಗಳಿಗೆ ಕನ್ನ ಹಾಕುತ್ತಿರುವ ಘಟನೆ ಭಯಾನಕ ವಿಡಿಯೋವೊಂದು ಕಿತ್ತೂರು ಜನತೆಯನ್ನು ಬೆಚ್ಚಿ ಬೀಳಿಸಿದೆ.
ಮಾರಕಾಸ್ತ್ರ ಸಹಿತ ಅಖಾಡಕ್ಕಿಳಿಯುವ ಖದೀಮರು: ಸಿಸಿಟಿವಿಯಲ್ಲಿ ಡಕಾಯಿತರ ಕೈಚಳಕ ಸೆರೆ - ಕಳ್ಳತನ ಪ್ರಕರಣ
ಮಾರಕಾಸ್ತ್ರ ಸಹಿತ ಕಳ್ಳತನಕ್ಕೆ ಇಳಿಯುತ್ತಿರುವ ದರೋಡೆಕೋರರ ಗ್ಯಾಂಗ್ ಬಾರ್, ಕಿರಾಣಿ ಮಳಿಗೆಗಳಿಗೆ ಕನ್ನ ಹಾಕುತ್ತಿರುವ ಘಟನೆ ಕಿತ್ತೂರು ಜನತೆಯನ್ನು ಬೆಚ್ಚಿ ಬೀಳಿಸಿದೆ.
ಕೈಚಳಕ ಸೆರೆ
ಒಂದೇ ತಿಂಗಳಲ್ಲಿ ಕಿತ್ತೂರು ಪಟ್ಟಣದಲ್ಲಿ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದೀಗ ಡಕಾಯಿತರ ಕೈಚಳಕ ಸಿಸಿಟಿವಿದಲ್ಲಿ ಸೆರೆಯಾಗಿದೆ. ಕಳೆದ 6 ತಿಂಗಳಿನಿಂದ ಕಿತ್ತೂರು ಪಟ್ಟಣದಲ್ಲಿ ಪೂರ್ಣಾವಧಿ ಪಿಎಸ್ಐ ಇಲ್ಲದಿರುವುದೇ ಕಳ್ಳತನ ಪ್ರಕರಣ ಹೆಚ್ಚಾಗಲು ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಕಿತ್ತೂರು ಪಟ್ಟಣದಲ್ಲಿರುವ ವರ್ಶಿಣಿ ಬಾರ್ ಸೇರಿದಂತೆ ಎರಡು ಬಾರ್ ಹಾಗೂ ಎರಡು ಕಿರಾಣಿ ಮಳಿಗೆಗಳಿಗೆ ಖದೀಮರು ಕನ್ನಹಾಕಿದ್ದಾರೆ. ಬಾರ್ನೊಳಗಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಮದ್ಯದ ಬಾಟಲಿ ಕದ್ದು ಖದೀಮರು ಪರಾರಿಯಾಗಿದ್ದಾರೆ.