ಕರ್ನಾಟಕ

karnataka

ETV Bharat / state

ಕೆವಿಜಿ ಬ್ಯಾಂಕ್ ಕಳ್ಳತನ ಪ್ರಕರಣ: ಶಿಕ್ಷಕಿಯನ್ನು ವರ್ಗಾಯಿಸಲು ಗ್ರಾಮಸ್ಥರ ಪಟ್ಟು - ಲಿಂಗನಮಠ ಗ್ರಾಮದ ಕೆವಿಜಿ ಬ್ಯಾಂಕ್ ಕಳ್ಳತನ

ಲಿಂಗನಮಠ ಗ್ರಾಮದ ಕೆವಿಜಿ ಬ್ಯಾಂಕ್ ಹಗಲು ಹೊತ್ತಲ್ಲೇ ಮೂರು ಬಾರಿ ಕಳ್ಳತನವಾಗಿತ್ತು. ಬೆಳಗಾವಿ ಎಸ್​ಪಿ ಲಕ್ಷ್ಮಣ‌ ನಿಂಬರಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಐಪಿಎಸ್ ಪ್ರೊಬೆಷನರಿ ಅಧಿಕಾರಿ ಪ್ರದೀಪ್ ಗುಂಟೆಯವರಿಗೆ ತನಿಖೆಯ ಜವಾಬ್ದಾರಿ ಹೊರಿಸಿದ್ದರು.

ಶಿಕ್ಷಕಿಯನ್ನು ವರ್ಗಾಯಿಸಲು ಗ್ರಾಮಸ್ಥರ ಪಟ್ಟು

By

Published : Oct 31, 2019, 9:37 PM IST

ಬೆಳಗಾವಿ: ಬ್ಯಾಂಕ್ ಕಳ್ಳತನ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಪೊಲೀಸ್​ ತನಿಖೆಗೆ, ಅಸಹಕಾರ ತೋರಿದ ಮುಖ್ಯಶಿಕ್ಷಕಿಯನ್ನು ವರ್ಗಾವಣೆ ಮಾಡುವಂತೆ ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ.

ಲಿಂಗನಮಠ ಗ್ರಾಮದ ಕೆವಿಜಿ ಬ್ಯಾಂಕ್ ಹಗಲಲ್ಲಿಯೇ ಮೂರು ಬಾರಿ ಕಳ್ಳತನವಾಗಿತ್ತು. ಬೆಳಗಾವಿ ಎಸ್​ಪಿ ಲಕ್ಷ್ಮಣ‌ ನಿಂಬರಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಐಪಿಎಸ್ ಪ್ರೋಬೇಷನರಿ ಅಧಿಕಾರಿ ಪ್ರದೀಪ್ ಗುಂಟೆಯವರಿಗೆ ತನಿಖೆಯ ಜವಾಬ್ದಾರಿಯನ್ನು ನೀಡಿದ್ದರು.

ಶಿಕ್ಷಕಿಯನ್ನು ವರ್ಗಾಯಿಸಲು ಗ್ರಾಮಸ್ಥರ ಪಟ್ಟು

ಬ್ಯಾಂಕ್ ಮುಂಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆ ಸಿಸಿ ಕ್ಯಾಮರಾ ದೃಶ್ಯಾವಳಿ ನೀಡುವಂತೆ ಪೊಲೀಸ್ ಅಧಿಕಾರಿ ಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಭಂಡಾರಿ ಅವರನ್ನು ಕೇಳಿಕೊಂಡಿದ್ದರು. ಆದರೆ ಜ್ಯೋತಿ ಭಂಡಾರಿ ಸಿಸಿ ಕ್ಯಾಮರಾ ಫುಟೇಜ್‌ ನೀಡಲು ನಿರಾಕರಿಸಿದ್ದರು. ಸಿಸಿ ಕ್ಯಾಮರಾಗಳ ಫುಟೇಜ್‌ ಕಂಪ್ಯೂಟರ್​ನಲ್ಲಿದೆ. ಕೀ ನನ್ನ ಬಳಿ ಇಲ್ಲ, ಟೆಕ್ನಿಷಿಯನ್ ಬಳಿ ಇದೆ ಎಂದು ಪೊಲೀಸರನ್ನು ಮೂರು ಗಂಟೆಕಾಲ ಕಾಯಿಸಿದ್ದಾರೆ ಎನ್ನಲಾಗಿದೆ.

ಶಿಕ್ಷಣ ‌ಇಲಾಖೆ‌ಯ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದರೂ ಸಹ, ಶಿಕ್ಷಕಿ‌ ಜ್ಯೋತಿ ಕ್ಯಾರೆ ಎಂದಿರಲಿಲ್ಲ. ಈ ಹಿನ್ನೆಲೆ ಪೊಲೀಸರಿಗೆ ಅಸಹಕಾರ ನೀಡಿದ್ದಕ್ಕೆ, ಅವರನ್ನು ವರ್ಗಾವಣೆ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ABOUT THE AUTHOR

...view details