ಗೋಕಾಕ:ಗೋಕಾಕ ಉಪಚುನಾವಣೆ ರಾಷ್ಟ್ರ ಮತ್ತು ರಾಜ್ಯದ ಗಮನ ಸೆಳೆದಿದೆ. ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಜನರ ತೀರ್ಪು ಎಲ್ಲರ ಗಮನ ಸೆಳೆಯಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಜನರ ತೀರ್ಪು ಎಲ್ಲರ ಗಮನ ಸೆಳೆಯಲಿದೆ: ಸತೀಶ್ ಜಾರಕಿಹೊಳಿ - sthish jarakiholi gokak by- election
ಗೋಕಾಕ ಉಪಚುನಾವಣೆ ರಾಷ್ಟ್ರ ಮತ್ತು ರಾಜ್ಯದ ಗಮನ ಸೆಳೆದಿದೆ. ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಜನರ ತೀರ್ಪು ಎಲ್ಲರ ಗಮನ ಸೆಳೆಯಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸತೀಶ್ ಜಾರಕಿಹೊಳಿ
ನಗರದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು ನಮ್ಮ ಪಕ್ಷದ ಪರವಾಗಿ ಮತ್ತೊಂದು ಸುತ್ತಿನಲ್ಲಿ ಕಾರ್ಯಕರ್ತರನ್ನು, ಮತದಾರರನ್ನು ಭೇಟಿ ಮಾಡುತ್ತಿದ್ದೇವೆ. ನಿನ್ನೆ ಕ್ಷೇತ್ರದಲ್ಲಿ ಅರಭಾವಿಯವರು ಬಂದು ಇಲ್ಲಿ ತೊಂದರೆ ಮಾಡ್ತಾ ಇದ್ರು. ರಾತ್ರಿ ಅವರನ್ನು ಹೊರ ಹಾಕುವ ಕೆಲಸ ಮಾಡಿದ್ದೇವೆ ಎಂದರು.
ರಮೇಶ ಜಾರಕಿಹೊಳಿ ಟೀಕೆಗೆ ಪ್ರತಿಕ್ರಿಯಿಸಿ ಅವನ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ದಿನಾಂಕ 9 ರ ನಂತರ ಎಲ್ಲವೂ ಹೊರ ಬರಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.