ಕರ್ನಾಟಕ

karnataka

ETV Bharat / state

ಅಥಣಿ : ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿ ಸಾವು - ಸುಟ್ಟ ಗಾಯದೊಂದಿಗೆ ಕೃಷ್ಣಾ ನದಿ ದಂಡೆಯಲ್ಲಿ 2 ವರ್ಷದ ಬಾಲಕಿ ಪತ್ತೆ ವಾಮಾಚಾರಕ್ಕೆ ಬಳಕೆ ಶಂಕೆ

ವಿಡಿಯೋ ಕ್ಲಿಯರ್ ಇಲ್ಲದಕ್ಕೆ ಎಫ್‌ಎಸ್‌ಎಲ್ ಸ್ಯಾಂಪಲ್ ರಿಜೆಕ್ಟ್ ಮಾಡಿತ್ತು. ಇಂದು ಬೆಳಗಿನ ಜಾವ ಬಾಲಕಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಮಗುವಿನ ಗುರುತು ಪತ್ತೆಯಾಗುವ ಮುನ್ನವೇ ಬಾಲಕಿ ಸಾವನ್ನಪ್ಪಿದ್ದಾಳೆ..

ಸುಟ್ಟು ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿ ಸಾವು
ಸುಟ್ಟು ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿ ಸಾವು

By

Published : Oct 1, 2021, 3:17 PM IST

ಅಥಣಿ :ತಾಲೂಕಿನ ಹಲ್ಯಾಳ ಗ್ರಾಮದಲ್ಲಿ 1 ತಿಂಗಳ ಹಿಂದಷ್ಟೇ ಎರಡು ವರ್ಷದ ಬಾಲಕಿಯನ್ನ ಸುಟ್ಟು ಕಬ್ಬಿನ ಗದ್ದೆಗೆ ಎಸೆದಿರುವ ಪ್ರಕರಣ ನಡೆದಿತ್ತು. ಆದರೆ, ಈಗ ಗಾಯಗೊಂಡಿದ್ದ ಆ ಬಾಲಕಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಹಲ್ಯಾಳ ಗ್ರಾಮದ ಬಳಿಯ ಕೃಷ್ಣಾನದಿಯ ಪಕ್ಕದ ತೋಟದಲ್ಲಿ ಬಾಲಕಿ ಪತ್ತೆಯಾಗಿದ್ದಳು. ಗ್ರಾಮಸ್ಥರು ಆ್ಯಂಬುಲೆನ್ಸ್​ನಲ್ಲಿ ಮಗುವನ್ನು ತಾಲೂಕು ಸಮುದಾಯ ಆಸ್ಪತ್ರೆಗೆ ರವಾನಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.

ಬೆಳೆಗಾವಿ ಜಿಲ್ಲಾ ಆಡಳಿತ ಬಾಲಕಿ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದೆ. 6 ತಂಡಗಳನ್ನು ರಚಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಮಗುವನ್ನು ಹೋಲುವ ಒಂದು ವಿಡಿಯೋ ವೈರಲ್ ಆಗಿತ್ತು. ಪೊಲೀಸರು ಮಗುವಿನ ಪತ್ತೆಗಾಗಿ ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ಸ್ಯಾಂಪಲ್ ಕಳಿಸಿದ್ದರು.

ವಿಡಿಯೋ ಕ್ಲಿಯರ್ ಇಲ್ಲದಕ್ಕೆ ಎಫ್‌ಎಸ್‌ಎಲ್ ಸ್ಯಾಂಪಲ್ ರಿಜೆಕ್ಟ್ ಮಾಡಿತ್ತು. ಇಂದು ಬೆಳಗಿನ ಜಾವ ಬಾಲಕಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಮಗುವಿನ ಗುರುತು ಪತ್ತೆಯಾಗುವ ಮುನ್ನವೇ ಬಾಲಕಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ : ಸುಟ್ಟ ಗಾಯದೊಂದಿಗೆ ಕೃಷ್ಣಾ ನದಿ ದಂಡೆಯಲ್ಲಿ 2 ವರ್ಷದ ಬಾಲಕಿ ಪತ್ತೆ: ವಾಮಾಚಾರಕ್ಕೆ ಬಳಕೆ ಶಂಕೆ

ABOUT THE AUTHOR

...view details