ಬೆಳಗಾವಿ :ಈಜಲು ತೆರಳಿದ್ದ ತಂದೆ ಹಾಗೂ ಮಗ ಇಬ್ಬರೂ ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಮೂಡಲಗಿ ತಾಲೂಕು ರಾಜಾಪುರ ಗ್ರಾಮದಲ್ಲಿ ನಡೆದಿದೆ.
ಈಜಲು ತೆರಳಿದ್ದ ಇಬ್ಬರು ಬಾವಿಯಲ್ಲಿ ಮುಳುಗಿ ಸಾವು.. - belagavi crime news
ಮಗನ ಬೆನ್ನಿಗೆ ಡಬ್ಬಿ ಕಟ್ಟಿ ನೀರಿಗೆ ಇಳಿಸಿದ್ದರು. ಬೆನ್ನಿಗಿದ್ದ ಡಬ್ಬಿ ಬಿಚ್ಚಿದ್ದು ಪರುಶರಾಮ ಕಮತಿ ಮುಳುಗತೊಡಗಿದ್ದಾನೆ. ಈಜು ಬಾರದ ಸತ್ತೆಪ್ಪ ಮಗನ ರಕ್ಷಿಸಲೆಂದು ನೀರಿಗೆ ಹಾರಿದ್ದಾರೆ. ಆಗ ಪರುಶರಾಮ ತಂದೆಯನ್ನು ಬಿಗಿಯಾಗಿ ಅಪ್ಪಿಕೊಂಡಿದ್ದರಿಂದ ಇಬ್ಬರೂ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪರುಶರಾಮ ಸತ್ತೆಪ್ಪ ಕಮತಿ (15), ಸತ್ತೆಪ್ಪ ರಾಮಪ್ಪ ಕಮತಿ (75) ಮೃತ ದುರ್ದೈವಿಗಳಾಗಿದ್ದಾರೆ. ಸತ್ತೆಪ್ಪ ಅವರು ಮಗನಿಗೆ ಈಜು ಕಲಿಸಲು ತೋಟದಲ್ಲಿರುವ ಬಾವಿಗೆ ಕರೆದೊಯ್ದಿದ್ದರು. ಮಗನ ಬೆನ್ನಿಗೆ ಡಬ್ಬಿ ಕಟ್ಟಿ ನೀರಿಗೆ ಇಳಿಸಿದ್ದರು. ಬೆನ್ನಿಗಿದ್ದ ಡಬ್ಬಿ ಬಿಚ್ಚಿದ್ದು ಪರುಶರಾಮ ಕಮತಿ ಮುಳುಗತೊಡಗಿದ್ದಾನೆ. ಈಜು ಬಾರದ ಸತ್ತೆಪ್ಪ ಮಗನ ರಕ್ಷಿಸಲೆಂದು ನೀರಿಗೆ ಹಾರಿದ್ದಾರೆ. ಆಗ ಪರುಶರಾಮ ತಂದೆಯನ್ನು ಬಿಗಿಯಾಗಿ ಅಪ್ಪಿಕೊಂಡಿದ್ದರಿಂದ ಇಬ್ಬರೂ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಾವಿಯ ದಡದಲ್ಲಿ ಕುಳಿತಿದ್ದ ಪರುಶರಾಮ ಸಹೋದರ ರಕ್ಷಣೆಗಾಗಿ ಕಿರಿಚಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.