ಬೆಳಗಾವಿ:ಕಳ್ಳತನ ಮಾಡಿ ಎಸ್ಕೇಪ್ ಆಗಲು ಹೋದ ಕಳ್ಳನೋರ್ವ ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿರುವ ಘಟನೆ ನಗರದ ಹಿಂಡಲಗಾದ ಸಿದ್ಧಾರ್ಥ ಕಾಲೋನಿಯಲ್ಲಿ ನಡೆದಿದೆ.
ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ ಕಳ್ಳ ಕಟ್ಟಡದ ಮೇಲಿಂದ ಬಿದ್ದು ತಗ್ಲಾಕ್ಕೊಂಡ! - belagavi latest news
ಕಳ್ಳತನ ಮಾಡಿ ಎಸ್ಕೇಪ್ ಆಗಲು ಹೋದ ಕಳ್ಳನೋರ್ವ ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿರುವ ಘಟನೆ ನಗರದ ಹಿಂಡಲಗಾದ ಸಿದ್ಧಾರ್ಥ ಕಾಲೋನಿಯಲ್ಲಿ ನಡೆದಿದೆ.
ರವಿ ಬಾಬು ಹಾಲಟ್ಟಿ ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿರುವ ಕಳ್ಳ. ಯಲ್ಲಮ್ಮನ ಜಾತ್ರೆಗೆ ತೆರಳಿದ್ದ ಭಕ್ತರ ಮನೆಗಳನ್ನೇ ನಾಲ್ವರು ಕಳ್ಳರು ಟಾರ್ಗೆಟ್ ಮಾಡಿದ್ದರು. ಸಿದ್ಧಾರ್ಥ ಕಾಲೋನಿಯಲ್ಲಿ ಎರಡು ಮನೆ ಕಳ್ಳತನ ಮಾಡಿದ್ದ ಖದೀಮರು, ವಿಜಯ್ ಗೋಜಗೇಕರ್ ಎಂಬುವವರ ಮನೆಗೆ ನುಗ್ಗುವ ವೇಳೆ ಪಕ್ಕದ ಮನೆಯವರ ಕೈಗೆ ಓರ್ವ ಸಿಕ್ಕಿಬಿದ್ದಿದ್ದಾನೆ.
ಈ ವೇಳೆ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಮಹಡಿಯೊಂದರ ಮೇಲಿಂದ ಬಿದ್ದು ಕಳ್ಳ ಸಿಕ್ಕಿಹಾಕಿಕೊಂಡಿದ್ದಾನೆ. ಬಂಧಿತ ಆರೋಪಿಯಿಂದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.