ಅಥಣಿ: ಕೊರೊನಾ ಹತೋಟಿಗೆ ಬಾರದೆ ಇದ್ದರೆ ರಾಜ್ಯದಲ್ಲಿ ಜನತಾ ಕರ್ಫ್ಯೂ ಯಥಾಸ್ಥಿತಿ ಮುಂದುವರಿಸಬಹುದೆಂದು ಡಿಸಿಎಂ ಲಕ್ಷ್ಮಣ್ ಸವದಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಕಡಿಮೆಯಾಗದಿದ್ದರೆ ಯಥಾಸ್ಥಿತಿ ಮುಂದುವರಿಸಬಹುದು: ಡಿಸಿಎಂ ಲಕ್ಷ್ಮಣ್ ಸವದಿ - ಜನತಾ ಕರ್ಫ್ಯೂ
ರಾಜ್ಯದಲ್ಲಿ ಸೋಂಕು ಕಡಿಮೆಯಾಗದಿದ್ದರೆ ಯಥಾಸ್ಥಿತಿ ಮುಂದುವರಿಸಬಹುದು. ಇದಕ್ಕಾಗಿ ಜನ ಸಹಕಾರ ನೀಡಬೇಕೆಂದು ಡಿಸಿಎಂ ಲಕ್ಷ್ಮಣ್ ಸವದಿ ಅಥಣಿಯಲ್ಲಿ ಹೇಳಿದ್ದಾರೆ.
ಡಿಸಿಎಂ ಲಕ್ಷ್ಮಣ್ ಸವದಿ
ನಗರದಲ್ಲಿ ಮಾತನಾಡಿದ ಅವರು. ಕೊರೊನಾ ನಿಯಂತ್ರಿಸಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಸೋಂಕು ನಿಯಂತ್ರಣಕ್ಕೆ ತರಲು ಜನರ ಸಹಕಾರ ಅಗತ್ಯವಿದೆ. ಉಪ ಚುನಾವಣೆ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.
ಸಾರಿಗೆ ಇಲಾಖೆ ಮೂರು ದಿನದಿಂದ ಸಾಕಷ್ಟು ನಷ್ಟ ಅನುಭವಿಸಿದೆ. ನೌಕರರ ಸಂಬಳಕ್ಕೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.