ಕರ್ನಾಟಕ

karnataka

ETV Bharat / state

BCP ರೈತರ ಕುರಿತು ನೀಡಿರುವ ಹೇಳಿಕೆ ಹಿಂಪಡೆಯಬೇಕು: ಬಿಜೆಪಿ ಸಂಸದರಿಂದಲೇ ಒತ್ತಾಯ - statement of the Minister of State for Agriculture, BC patel

ಸಚಿವ ಬಿ.ಸಿ.ಪಾಟೀಲ ಅವರು ಏನೋ ಹೇಳಲು ಹೊರಟು ಇನ್ನೇನೋ ಹೇಳಿದ್ದಾರೆ. ರೈತರು ಈ ಬಗ್ಗೆ ಅಪಾರ್ಥ ಮಾಡಿಕೊಳ್ಳಬಾರದು‌. ಕೃಷಿ ಸಚಿವರು ನೀಡಿದ ಹೇಳಿಕೆಯನ್ನು ವಾಪಸ್ ಪಡೆಯಲು ಅವರಿಗೆ ಮನವಿ‌ ಮಾಡುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಈರಣ್ಣಾ ಕಡಾಡಿ
ಈರಣ್ಣಾ ಕಡಾಡಿ

By

Published : Dec 3, 2020, 9:15 PM IST

ಬೆಳಗಾವಿ:ರೈತರ ಕುರಿತಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಕೃಷಿ ಸಚಿವ ಬಿ.ಸಿ.ಪಾಟೀಲ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು‌ ಎಂಬ ಕಳಕಳಿ ಇಟ್ಟುಕೊಂಡು ಸ್ವಲ್ಪ ಯಡವಟ್ಟಾಗಿ ಮಾತನಾಡಿದ್ದಾರೆ. ಈ ಕುರಿತು ಯಾರೂ ಬೇಜಾರಾಗುವುದು ಬೇಡ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ

ರೈತರು‌ ಸ್ವಾಭಿಮಾನಿಗಳು ಯಾವುದೇ ಕಾರಣಕ್ಕೂ ಹೇಡಿಗಳಲ್ಲ. ಭಾರತೀಯ ಜನತಾ ಪಕ್ಷ ರೈತಪರ ಕಳಕಳಿ ಹೊಂದಿರುವ ಪಕ್ಷ. ಪಾಟೀಲ ಅವರು ಏನೋ ಹೇಳಲು ಹೊರಟು ಇನ್ನೇನೋ ಹೇಳಿದ್ದಾರೆ. ರೈತರು ಈ ಬಗ್ಗೆ ಅಪಾರ್ಥ ಮಾಡಿಕೊಳ್ಳಬಾರದು‌. ಕೃಷಿ ಸಚಿವರು ನೀಡಿದ ಹೇಳಿಕೆಯನ್ನು ವಾಪಸ್ ಪಡೆಯಲು ಅವರಿಗೆ ಮನವಿ‌ ಮಾಡುತ್ತೇನೆ ಎಂದು ಹೇಳಿದರು.

ABOUT THE AUTHOR

...view details