ಬೆಳಗಾವಿ : ಕುಂದಾನಗರಿ ಬೆಳಗಾವಿ ಈಗ ಕೂಲ್ ಕೂಲಾಗಿದೆ.ಬಿಸಿಲಿನ ಧಗೆಗೆ ಬೆಂದು ಹೋಗಿದ್ದ ಗಡಿ ಭಾಗದ ಜನರಿಗೆ ಮಳೆರಾಯ ತಂಪು ನೀಡಿದ್ದಾನೆ. ಆದರೆ, ಧಾರಾಕಾರವಾಗಿ ಸುರಿದ ಗಾಳಿ ಸಹಿತ ಮಳೆಗೆ ಅನೇಕ ಮನೆಗಳು ನೆಲಸಮವಾಗಿವೆ. ಮನೆಗಳ ಮೇಲ್ಛಾವಣಿಗಳು ಕುಸಿದು ಬಡವರ ಜೀವನ ಬೀದಿಗೆ ಬಂದಂತಾಗಿದೆ.
ಕುಂದಾನಗರಿ ಕೂಲಾಗಿಸಿದ ಮಳೆ.. ಬಿರುಗಾಳಿ ಸಹಿತ ಆರ್ಭಟಿಸಿ ಜನ ಜೀವನ ಅಸ್ತವ್ಯಸ್ತ!
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅನೇಕ ಮನೆಗಳು ಬಿದ್ದಿವೆ. ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ. ಅನೇಕ ಮರ ಗಿಡಗಳು ನೆಲಕಚ್ಚಿವೆ, ವಾಹನಗಳು ಜಖಂಗೊಂಡಿವೆ. ವಿದ್ಯುತ್ ಲೈನಗಳಿಗೂ ಅಪಾರ ಹಾನಿಯಾಗಿದ್ದು, ಕುಂದಾನಗರಿ ಜನತೆಗೆ ಮಳೆ ಸಂತೋಷ ನೀಡುವುದರ ಜೊತೆಗೆ ಅನೇಕ ಜನರ ಬದುಕನ್ನು ಮೂರಾಬಟ್ಟೆ ಮಾಡಿದಂತಾಗಿದೆ.
ಕುಂದಾನಗರಿಯಲ್ಲಿ ವರುಣನ ಆರ್ಭಟ
ಇಂದು ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅನೇಕ ಮನೆಗಳು ಬಿದ್ದಿದ್ದು, ಹಲವೆಡೆ ಹಾನಿ ಸಂಭವಿಸಿವೆ. ಅನೇಕ ಮರ ಗಿಡಗಳು ನೆಲಕಚ್ಚಿದ್ದು, ವಾಹನಗಳು ಜಖಂ ಆಗಿವೆ. ವಿದ್ಯುತ್ ಲೈನಗಳಿಗೂ ಅಪಾರ ಹಾನಿಯಾಗಿದ್ದು, ಕುಂದಾನಗರಿ ಜನತೆಗೆ ಮಳೆ ಸಂತೋಷ ನೀಡುವುದರ ಜೊತೆಗೆ ಅನೇಕ ಜನರ ಬದುಕನ್ನು ಮೂರಾಬಟ್ಟೆ ಮಾಡಿದಂತಾಗಿದೆ.ಬೆಳಗಾವಿ ತಾಲೂಕಿನ ಆದರ್ಶನಗರ, ಭಾಗ್ಯನಗರ, ಸುರೇಬಾವಿ ಗ್ರಾಮದಲ್ಲೂ ಮಳೆರಾಯ ಬಾರಿ ಆವಾಂತರ ಸೃಷ್ಟಿಸಿದ್ದಾನೆ.