ಬೆಳಗಾವಿ: ಅನ್ಯರಾಜ್ಯಗಳಲ್ಲಿ ಕ್ವಾರಂಟೈನಲ್ಲಿದ್ದ ಮೂವರು ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಕ್ವಾರಂಟೈನಿಗಳ ಹುಚ್ಚಾಟ: ಬೆಳಗಾವಿಯಲ್ಲಿ ಹೆಚ್ಚಿದ ಆತಂಕ - ಅಕ್ರಮವಾಗಿ ರಾಜ್ಯ ಪ್ರವೇಶಿಸಿ ಬೆಳಗಾವಿ ನಗರದಲ್ಲಿ ಸಿಕ್ಕಿಬಿದ್ದ ಕ್ವಾರಂಟೈನ್ಸ್
ನೆರೆಯ ಮಹಾರಾಷ್ಟ್ರದಿಂದ ಇಬ್ಬರು ಹಾಗೂ ಗೋವಾದಿಂದ ಓರ್ವ ವ್ಯಕ್ತಿ ಅಕ್ರಮವಾಗಿ ರಾಜ್ಯ ಪ್ರವೇಶಿಸಿ ಬೆಳಗಾವಿ ನಗರದಲ್ಲಿ ಸಿಕ್ಕಿಬಿದ್ದಿದ್ದಾರೆ. ಮೊದಲೇ ಕೊರೊನಾ ಅಟ್ಟಹಾಸದಿಂದ ಬೆಚ್ಚಿಬಿದ್ದಿರುವ ಬೆಳಗಾವಿಗೆ ಕ್ವಾರಂಟೈನಿಗಳ ಹುಚ್ಚಾಟ ಆತಂಕ ಹೆಚ್ಚಿಸಿದೆ.
ನೆರೆಯ ಮಹಾರಾಷ್ಟ್ರದಿಂದ ಇಬ್ಬರು ಹಾಗೂ ಗೋವಾದಿಂದ ಓರ್ವ ವ್ಯಕ್ತಿ ಅಕ್ರಮವಾಗಿ ರಾಜ್ಯ ಪ್ರವೇಶಿಸಿ ನಗರದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ಮೂವರ ಕೈ ಮೇಲೆ ಸೀಲ್ ಇರುವುದನ್ನು ಗಮನಿಸಿದ್ದ ಪೊಲೀಸ್ ಪೇದೆಯೊಬ್ಬ ಆರೋಗ್ಯಾಧಿಕಾರಿ ಗಮನಕ್ಕೆ ತಂದಿದ್ದಾರೆ. ಈ ಮೂವರನ್ನು ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಸ್ಕ್ರೀನಿಂಗ್ ಮಾಡಲಾಗಿದೆ.
ಇದರಲ್ಲಿ ಪುಣೆಯಿಂದ ಮರಳಿದ್ದ ಓರ್ವ ವ್ಯಕ್ತಿಯ ದೇಹದ ಉಷ್ಣತೆ 103 ಡಿಗ್ರಿ ಸೆಲ್ಸಿಯಸ್ ತೋರಿಸಿದೆ. ಇಬ್ಬರ ಟೆಂಪರೇಚರ್ ನಾರ್ಮಲ್ ಬಂದಿದೆ. ಮೊದಲೇ ಕೊರೊನಾ ಅಟ್ಟಹಾಸದಿಂದ ಬೆಚ್ಚಿಬಿದ್ದಿರುವ ಬೆಳಗಾವಿಗೆ ಕ್ವಾರಂಟೈನಿಗಳ ಹುಚ್ಚಾಟ ಆತಂಕ ಹೆಚ್ಚಿಸಿದೆ. ಮಹಾರಾಷ್ಟ್ರದಿಂದ ಇಬ್ಬರು ತರಕಾರಿ ಮಾರುವ ವಾಹನದಲ್ಲಿ ಹಾಗೂ ಗೋವಾದಿಂದ ಓರ್ವ ಕಾಲ್ನಡಿಗೆ ಮೂಲಕ ನಗರ ಪ್ರವೇಶಿಸಿದ್ದಾರೆ.