ಕರ್ನಾಟಕ

karnataka

ETV Bharat / state

ಕುಟುಂಬಸ್ಥರು ಜೊತೆಗಿದ್ದರೆ ಅರ್ಧ ಪ್ರಪಂಚ ‌ಗೆದ್ದ ಹಾಗೆ: ಐಜಿ ರಾಘವೇಂದ್ರ ಸುಹಾಸ್ - prison watchers passing out parade

ವ್ಯಕ್ತಿಗತ ಹಾಗೂ ಪ್ರೊಫೇಷನಲ್ ಜೀವನವನ್ನು ಸಮಾನಾಂತರವಾಗಿ ತೂಗಿಸಿಕೊಂಡು ಕುಟುಂಬಸ್ಥರೊಂದಿಗೆ ಸಾಕಷ್ಟು ಸಮಯ ಕಳೆಯಬೇಕು. ಪೊಲೀಸ್ ಹಾಗೂ ಪರಿವಾರದವರೊಂದಿಗೆ ಒಟ್ಟಾಗಿ ಜೀವನ ಸಾಗಿಸಬೇಕು ಎಂದು ಬೆಳಗಾವಿ ನಗರದಲ್ಲಿ ನಡೆದ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ಉತ್ತರ ವಲಯದ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಹೇಳಿದ್ರು.

The prison watchers passing out parade in belgavi
ಬೆಳಗಾವಿ

By

Published : Feb 3, 2021, 11:38 AM IST

ಬೆಳಗಾವಿ:ನಗರದ ಎಸ್ಪಿ ಆಫೀಸ್ ಎದುರಿಗಿರುವ ಜಿಲ್ಲಾ ಕವಾಯತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 2ನೇ ತಂಡದ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಸಮಾರಂಭ ಜರುಗಿತು. ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ್ ರೆಡ್ಡಿ ಅವರು ತರಬೇತಿ ಪಡೆದು ನಿರ್ಗಮನವಾಗುತ್ತಿರುವ 90 ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಬೆಳಗಾವಿ
ಒಳಾಂಗಣ ವಿಷಯ ಹಾಗೂ ಹೊರಾಂಗಣ ವಿಷಯ ಹಾಗೂ ಫೈರಿಂಗ್ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ, ತೃತೀಯ ಸ್ಥಾನ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಉತ್ತರ ವಲಯದ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ‌ ಮಾತನಾಡಿದ ಅವರು, ಕಾರಾಗೃಹ ವಿಭಾಗಕ್ಕೆ ಆಯ್ಕೆಯಾದ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಒಳಾಂಗಣ ಮತ್ತು ಹೊರಾಂಗಣ ತರಬೇತಿಯಲ್ಲಿ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ. ಸಾಕಷ್ಟು ಜನರು‌ ಉನ್ನತ ವ್ಯಾಸಂಗ ಮಾಡಿದ್ದಾರೆ. ಅವರಲ್ಲಿ ಕೀಳರಿಮೆ ಕಾಡಬಾರದು. ಸರ್ಕಾರಿ ಸೇವೆ ಮತ್ತು ಸರ್ಕಾರದ ಅನ್ನ ಎಲ್ಲರಿಗೂ ಸಿಗುವ ಅದೃಷ್ಟ ಇರುವುದಿಲ್ಲ. ಹೀಗಾಗಿ ಇಂತಹ ಒಳ್ಳೆಯ ಅವಕಾಶ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು.
ವ್ಯಕ್ತಿಗತ ಹಾಗೂ ಪ್ರೊಫೆಷನಲ್ ಜೀವನವನ್ನು ಸಮಾನಾಂತರವಾಗಿ ತೂಗಿಸಿಕೊಂಡು ಕುಟುಂಬಸ್ಥರೊಂದಿಗೆ ಸಾಕಷ್ಟು ಸಮಯ ಕಳೆಯಬೇಕು. ಪೊಲೀಸ್ ಹಾಗೂ ಪರಿವಾರದವರೊಂದಿಗೆ ಒಟ್ಟಾಗಿ ಜೀವನ ಸಾಗಿಸಬೇಕು. ಆಗ ಜೀವನ ಸುಖಮಯವಾಗಿರುತ್ತದೆ. ಅದಕ್ಕಾಗಿಯೇ ಪೊಲೀಸ್ ಇಲಾಖೆಯಿಂದ‌ ಗುಣಮಟ್ಟದ ಪೊಲೀಸ್ ವಸತಿ‌ ಗೃಹಗಳನ್ನ ನಿರ್ಮಿಸಲಾಗುತ್ತಿದೆ. ಹೀಗಾಗಿ ನಿಮ್ಮ ಪರಿವಾರದವರನ್ನು ಜೊತೆಗೆ ಇಟ್ಟುಕೊಂಡು ಇಲಾಖೆ ಕೆಲಸ ನಿರ್ವಹಿಸಬೇಕು. ಕುಟುಂಬಸ್ಥರು ಜೊತೆಗಿದ್ದರೆ ಅರ್ಧ ಪ್ರಪಂಚ ‌ಗೆದ್ದ ಹಾಗೆ ಎಂದರು.
ಯೋಗ, ಧ್ಯಾನ, ಕರಾಟೆ, ಶಾರೀರಿಕ ವ್ಯಾಯಾಮ, ಒನ್ ಮಿನಿಟ್ ಡ್ರಿಲ್, ರೋಡ್ ವಾಕ್ ಅಂಡ್ ರನ್, ಅಡೆತಡೆಗಳ ಜಿಗಿತ, ಆಯುಧಗಳ ಜೊತೆ ಕವಾಯತು, ಆಯುಧಗಳಿಲ್ಲದೆ ಮಾಡುವ ಕವಾಯತು, ಫೈರಿಂಗ್ ಅಭ್ಯಾಸ, ಕ್ರೌಡ್ ಕಂಟೋಲ್, ಫೈರಿಂಗ್ ಹಾಗೂ ಅಶ್ರುವಾಯುಗಳ ಬಗ್ಗೆ ಬೋಧನೆ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗಿದೆ. ಹಾಗೆಯೇ ಮನರಂಜನೆ ಮತ್ತು ಮನೋವಿಕಾಸಕ್ಕಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿಗಳಾದ ಡಾ. ವಿಕ್ರಮ ಆಮಟೆ, ಚಂದ್ರಶೇಖರ ನೀಲಗಾರ, ಕೆಎಸ್ಆರ್​ಪಿ ಕಮಾಡೆಂಟ್ ಹಮ್ಜಾ ಹುಸೇನ್ ಇದ್ದರು.

ABOUT THE AUTHOR

...view details