ಚಿಕ್ಕೋಡಿ(ಬೆಳಗಾವಿ): ದ್ವಿಚಕ್ರ ವಾಹನಗಳಲ್ಲಿ ಡಬಲ್ ರೈಡಿಂಗ್ ಮಾಡುತ್ತಿದ್ದ ಸವಾರರಿಗೆ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿರುವ ಘಟನೆ ತಾಲೂಕಿನ ಹುಕ್ಕೇರಿ ನಗರದಲ್ಲಿ ನಡೆದಿದೆ.
ನಿಯಮ ಮೀರಿ ವಾಹನ ಚಾಲನೆ: ದಂಡ ವಿಧಿಸಿದ ಪೊಲೀಸರು - Covid 19
ಮೂರನೇ ಹಂತದ ಲಾಕ್ಡೌನ್ ವೇಳೆ, ಸರ್ಕಾರ ಕೆಲವೊಂದು ನಿಯಮಗಳನ್ನು ಸಡಿಲಿಸಿ ಜನರ ಸಂಚಾರಕ್ಕೆ ಅನವು ಮಾಡಿ ಕೊಟ್ಟಿದೆ. ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬ ಹಾಗೂ ನಾಲ್ಕು ಚಕ್ರದ ವಾಹನಗಳಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಸಲು ಅನುಮತಿ ನೀಡಿದೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಬೇಕಾ ಬಿಟ್ಟಿಯಾಗಿ ತಿರುಗಾಡುವವರಿಗೆ ಪೊಲೀಸರು ದಂಡ ವಿಧಿಸಿ ಪಾಠ ಕಲಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಮೂರನೇ ಹಂತದ ಲಾಕ್ಡೌನ್ ವೇಳೆ, ಸರ್ಕಾರ ಕೆಲವೊಂದು ನಿಯಮಗಳನ್ನು ಸಡಿಲಿಸಿ ಜನರ ಸಂಚಾರಕ್ಕೆ ಅನವು ಮಾಡಿ ಕೊಟ್ಟಿದೆ. ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು ಹಾಗೂ ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಸಲು ಅನುಮತಿ ನೀಡಿದೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಬೇಕಾ ಬಿಟ್ಟಿಯಾಗಿ ತಿರುಗಾಡುವವರಿಗೆ ಪೊಲೀಸರು ದಂಡ ವಿಧಿಸಿ ಪಾಠ ಕಲಿಸಿದ್ದಾರೆ.
ಅಷ್ಟೇ ಅಲ್ಲದೆ, ಹುಕ್ಕೇರಿ ನಗರದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದು ನಿಯಮ ಪಾಲಿಸದೇ ಬೇಕಾಬಿಟ್ಟಿ ವ್ಯಾಪಾರ ಮಾಡುವುದನ್ನು ಕಂಡು ಪಿಎಸ್‌ಐ ಶಿವಾನಂದ ಗುಡಗನಟ್ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಫಿಲ್ಡಿಗಿಳಿದಿದ್ದಾರೆ. ಅಂಗಡಿಗಳಲ್ಲಿ ಸಾಮಾಜಿಕ ಅಂತರ ಮತ್ತು ಮುಖಕ್ಕೆ ಮಾಸ್ಕ್ ಧರಿಸದೇ ಇರುವ ಗ್ರಾಹಕರಿಗೆ ದಿನಸಿ ವಿತರಿಸದಂತೆ ಅಂಗಡಿಕಾರರಿಗೆ ಆದೇಶ ನೀಡಿ ಅವರಿಂದ ಮುಚ್ಚಳಿಕೆ ಬರೆಸಿಕೊಂಡರು. ನಂತರ ಪೊಲೀಸರು ನೂರಾರು ವಾಹನಗಳನ್ನು ಮತ್ತು ನಿಯಮ ಉಲ್ಲಂಘಿಸಿದ ಕಿರಾಣಿ ಅಂಗಡಿಕಾರರನ್ನು ವಶಕ್ಕೆ ಪಡೆದುಕೊಂಡು ದಂಡ ವಿಧಿಸಿದರು.