ಕರ್ನಾಟಕ

karnataka

ETV Bharat / state

ಗಾಯದಿಂದ ಬಳಲುತ್ತಿದ್ದ ನವಿಲಿಗೆ ಚಿಕಿತ್ಸೆ ನೀಡಿ ಮಾನವಿಯತೆ ಮೆರೆದ ಸ್ಥಳೀಯರು - Chikodi treated the peacock News

ರೈತನ ತೋಟದಲ್ಲಿ ನವಿಲು ಕೆಳಗೆ ಬಿದ್ದು ನರಳಾಡುತ್ತಿತ್ತು. ಇದನ್ನ ಕಂಡು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಸ್ಥಳಕ್ಕೆ ಧಾವಿಸಿ ನವಿಲನ್ನು ಕೆರೂರು ಗ್ರಾಮದ ಪಶು ವೈದ್ಯರ ಬಳಿ ತೆಗೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.

ನವಿಲಿಗೆ ಚಿಕಿತ್ಸೆ ನೀಡಿ ಮಾನವಿಯತೆ ಮೆರೆದ ಸ್ಥಳೀಯರು
ನವಿಲಿಗೆ ಚಿಕಿತ್ಸೆ ನೀಡಿ ಮಾನವಿಯತೆ ಮೆರೆದ ಸ್ಥಳೀಯರು

By

Published : Jul 16, 2020, 12:27 PM IST

ಚಿಕ್ಕೋಡಿ: ರೆಕ್ಕೆ ಹಾಗೂ ಕಾಲುಗಳಿಗೆ ತೀವ್ರ ಗಾಯವಾಗಿ ನರಕಯಾತನೆ ಅನುಭವಿಸುತ್ತಿದ್ದ ನವಿಲನ್ನು ರೈತರು ರಕ್ಷಿಸಿದ್ದಾರೆ. ನವಿಲಿಗೆ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸುವ ಮೂಲಕ ರಕ್ಷಣೆ ಮಾಡಿ, ಅರಣ್ಯ ಇಲಾಖೆಗೆ ಒಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದಿದೆ.

ನವಿಲಿಗೆ ಚಿಕಿತ್ಸೆ ನೀಡಿ ಮಾನವಿಯತೆ ಮೆರೆದ ರೈತರು

ಕೆರೂರು ಗ್ರಾಮದ ಈಶ್ವರ ಅಲಗೌಡ ಪಾಟೀಲ ಎಂಬ ರೈತನ ತೋಟದಲ್ಲಿ ನವಿಲು ಕೆಳಗೆ ಬಿದ್ದು ನರಳಾಡುತ್ತಿತ್ತು. ಇದನ್ನ ಕಂಡು ತಕ್ಷಣ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಸ್ಥಳಕ್ಕೆ ಧಾವಿಸಿ ನವಿಲನ್ನು ಕೆರೂರು ಗ್ರಾಮದ ಪಶು ವೈದ್ಯರ ಬಳಿ ತೆಗೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಿ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ABOUT THE AUTHOR

...view details