ಬೆಳಗಾವಿ: ಕೋವಿಡ್-19 ಸೋಂಕಿತರ ಹೆಸರು ಬಹಿರಂಗಪಡಿಸಿರುವ ಫೇಸ್‌ಬುಕ್ ಪೇಜ್ ವಿರುದ್ಧ ಇಲ್ಲಿನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಫೇಸ್ಬುಕ್ನಲ್ಲಿ ಕೊರೊನಾ ಸೋಂಕಿತರ ಹೆಸರು ಬಹಿರಂಗ: ಪ್ರಕರಣ ದಾಖಲು - revealed on the Facebook page
ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಹೆಸರನ್ನು ಬಹಿರಂಗಪಡಿಸಿದ ಫೇಸ್‌ಬುಕ್ ಪೇಜ್ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ
‘ಮಾರ್ವಲಸ್ ಬೆಲಗಾಮ್’ ಫೇಸ್‌ಬುಕ್ ಪೇಜ್ನಲ್ಲಿ ಏಪ್ರಿಲ್ 30ರಂದು ಬಿಮ್ಸ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ ಇಬ್ಬರು ಕೋವಿಡ್-19 ಸೋಂಕಿತ ಮಹಿಳೆಯರಾದ ಪಿ-149 ಹಾಗೂ ಪಿ-147 ಇವರ ಹೆಸರನ್ನು ಬಹಿರಂಗಪಡಿಸಲಾಗಿತ್ತು.
ಕೊರೊನಾ ನಿಯಮಾವಳಿ ಪ್ರಕಾರ ಸೋಂಕಿತರ ಹೆಸರುಗಳನ್ನು ಬಹಿರಂಗಪಡಿಸುವಂತಿಲ್ಲ. ಆದರೆ "ಮಾರ್ವಲಸ್ ಬೆಲಗಾಮ್" ಫೇಸ್‌ಬುಕ್ ಪೇಜ್ನಲ್ಲಿ ಪ್ರಕಟಿಸಿದ್ದರಿಂದ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.