ಕರ್ನಾಟಕ

karnataka

ETV Bharat / state

ತುಂಬಿ ಹರಿಯುತ್ತಿರುವ ಮಲಪ್ರಭಾ ನದಿ.. ರೈತರ ಮೊಗದಲ್ಲಿ ಮಂದಹಾಸ - KN_BGM_01_malapraba_Nadi_KA10009

ಜಿಲ್ಲೆಯ ಖಾನಾಪೂರ ತಾಲೂಕಿನ ಕನಕುಂಬಿ ಗ್ರಾಮದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹುಟ್ಟುವ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ತುಂಬಿ ಹರಿಯುತ್ತಿರುವ ಮಲಪ್ರಭಾ ನದಿ.. ರೈತರ ಮೊಗದಲ್ಲಿ ಮಂದಹಾಸ

By

Published : Jul 22, 2019, 10:24 PM IST

ಬೆಳಗಾವಿ:ಜಿಲ್ಲೆಯ ಅನೇಕ‌ ನದಿಗಳಲ್ಲಿ ಒಂದಾದ ಮಲಪ್ರಭಾ ನದಿ ಒಡಲು ತುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ರೈತರು ಸದ್ಯ ನಿರಾಳರಾಗಿದ್ದಾರೆ.

ತುಂಬಿ ಹರಿಯುತ್ತಿರುವ ಮಲಪ್ರಭಾ ನದಿ..

ಜಿಲ್ಲೆಯ ಖಾನಾಪೂರ ತಾಲೂಕಿನ ಕನಕುಂಬಿ ಗ್ರಾಮದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹುಟ್ಟುವ ಮಲಪ್ರಭಾ ನದಿ ರಾಜ್ಯದಲ್ಲಿ ಸುಮಾರು 304 ಕಿ.ಮೀ. ಹರಿದು ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿ ಪಾತ್ರಕ್ಕೆ ನೂರಾರು ಗ್ರಾಮಗಳು ಬರುವುದರಿಂದ ರೈತರ ಕೃಷಿ ಚಟುವಟಿಗಳು ಜೀವ ಪಡೆದುಕೊಂಡಿವೆ. ಮಲಪ್ರಭಾ ನದಿಗೆ ಮೂಲವಾಗಿ ಕನಕುಂಬಿ ಜಲಾಶಯದಿಂದ ನೀರು ಬರುತ್ತಿದ್ದು, ಈಗ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮಳೆಯಾಗುತ್ತಿದ್ದು, ಬತ್ತಿ ಹೋಗಿದ್ದ ಮಲಪ್ರಭಾ ನದಿಗೆ ಸದ್ಯ ಜೀವ ಪಡೆದುಕೊಂಡಿದೆ.

ಮಲಪ್ರಭಾ ನದಿಗೆ ಹೊಂದಿಕೊಂಡಂತೆ ಖಾನಾಪೂರ, ಬೈಲಹೊಂಗಲ, ಸವದತ್ತಿ ಸೇರಿದಂತೆ ಜಿಲ್ಲೆಯ ಪ್ರಮುಖ ಮೂರು ತಾಲೂಕುಗಳು ಇರುವುದರಿಂದ ನೂರಾರು ಹಳ್ಳಿಯ ರೈತರಿಗೆ ಅನೂಕುಲವಾಗುತ್ತದೆ. ಒಟ್ಟಿನಲ್ಲಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿರುವ ಪರಿಣಾಮ ರೈತರ ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

For All Latest Updates

ABOUT THE AUTHOR

...view details