ಚಿಕ್ಕೋಡಿ:ಮನೆ ಮುಂದೆ ಆಟವಾಡುತ್ತಿದ್ದ 8 ವರ್ಷದ ಬಾಲಕಿ ಅಕ್ಟೋಬರ್ 15 ರಂದು ಕಿಡ್ನ್ಯಾಪ್ ಆಗಿದ್ದಾಳೆ ಎಂದು ಬಾಲಕಿ ತಂದೆ ಕುಡಚಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಬಾಲಕಿ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಮನೆಮುಂದೆ ಆಟವಾಡ್ತಿದ್ದ ಬಾಲಕಿಯ ಅಪಹರಣ, ಬಾವಿಯಲ್ಲಿ ಶವವಾಗಿ ಪತ್ತೆ! - ಪರಮಾನಂದವಾಡಿ ಗ್ರಾಮದ ಅಪರಾಧ ಸುದ್ದಿ
ದುಷ್ಕರ್ಮಿಗಳಿಂದ ಅಪಹರಣಗೊಂಡ ಬಾಲಕಿಯ ಮೃತದೇಹ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಬಾವಿಯೊಂದರಲ್ಲಿ ಪತ್ತೆಯಾಗಿದೆ.
ಸಾವನ್ನಪ್ಪಿದ ಬಾಲಕಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಲಕ್ಷ್ಮೀ ಅತಾಲಟ್ಟಿ (8) ಅಪಹರಣಗೊಂಡ ಬಾಲಕಿ. ಮನೆಯ ಹತ್ತಿರದ ಬಾವಿಯೊಂದರಲ್ಲಿ ಕೈ ಕಾಲು ಕಟ್ಟಿ ಎಸೆದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಶವವನ್ನು ಬಾವಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಕುಡಚಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.