ಚಿಕ್ಕೋಡಿ:ವಕೀಲರು 25 ದಿನಗಳಿಂದ ನ್ಯಾಯಾಲಯದ ಕಲಾಪದಿಂದ ದೂರ ಉಳಿದಿದ್ದು, ಜನಸಾಮಾನ್ಯರು ಪರದಾಡುತ್ತಿರುವ ಪರಿಸ್ಥಿತಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ನ್ಯಾಯಾಲಯದಲ್ಲಿ ನಡೆದಿದೆ.
ನಿಪ್ಪಾಣಿಯಲ್ಲಿ 25 ದಿನಗಳಿಂದ ನ್ಯಾಯಾಲಯದ ಕಲಾಪದಿಂದ ದೂರ ಉಳಿದ ವಕೀಲರು: ಕಾರಣ? - Nippani Bar Association Committee
ವಕೀಲರು 25 ದಿನಗಳಿಂದ ನ್ಯಾಯಾಲಯದ ಕಲಾಪದಿಂದ ದೂರ ಉಳಿದಿದ್ದು, ಜನಸಾಮಾನ್ಯರು ಪರದಾಡುತ್ತಿರುವ ಪರಿಸ್ಥಿತಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ನ್ಯಾಯಾಲಯದಲ್ಲಿ ನಡೆದಿದೆ.
ಕೋರ್ಟಿನ ಕಲಾಪ ಅವಧಿ ಮುಗಿದರೂ ವಕೀಲರೊಬ್ಬರು ಡಮ್ಮಿ ಕೋರ್ಟ್ ನಡೆಸಿದ್ದಾರೆ ಎಂದು ವಕೀಲರು ದೂರಿದ್ದಾರೆ. ಸುಷ್ಮಾ ಬೇಂದ್ರೆ ಎಂಬ ವಕೀಲೆ ಹಾಗೂ ಮೂರು ಜನ ಜೂನಿಯರ್ ಲಾಯರ್ಗಳು ನ್ಯಾಯಾಲಯದ ವೇಳೆ ಮುಗಿದ ಬಳಿಕ ಸಂಜೆ 6 ರಿಂದ ರಾತ್ರಿ 9ರ ವರೆಗೆ ಡಮ್ಮಿ ಕೋರ್ಟ್ ನಡೆಸಿದ್ದಾರೆ ಎಂದು ಆರೋಪಿಸಿ ನಿಪ್ಪಾಣಿಯ ಬಾರ್ ಅಸೋಸಿಯೇಷನ್ ಕಮಿಟಿಯ ನ್ಯಾಯವಾದಿಗಳು ಕೋರ್ಟ್ ಕಲಾಪ ಬಹಿಷ್ಕರಿಸಿದ್ದಾರೆ.
ಡಿ.18 ರಿಂದ ನಿಪ್ಪಾಣಿ ನ್ಯಾಯಾಲಯದ ಸುಮಾರು 70 ವಕೀಲರು ಕಲಾಪದಿಂದ ದೂರ ಉಳಿದಿದ್ದು, ವಕೀಲರಿಲ್ಲದೆ ಜನರು ಪರದಾಡುತ್ತಿರುವಂತಾಗಿದೆ. ಇತ್ತ ಡಮ್ಮಿ ಕೋರ್ಟ್ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ವಕೀಲರ ಪಟ್ಟು ಹಿಡದಿದ್ದಾರೆ.