ಚಿಕ್ಕೋಡಿ(ಬೆಳಗಾವಿ):ನೇಕಾರರಿಗೆ ನೆರವಾಗಲು ಈಗಾಗಲೇ ಕಾಗವಾಡದಲ್ಲಿ ಕೆಲ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಕೊರೊನಾದಿಂದಾಗಿ ಕೊಂಚ ನಿಧಾನವಾದರೂ ಆದಷ್ಟು ಬೇಗ ಕಾಗವಾಡ ತಾಲೂಕಿಗೂ ಸರ್ಕಾರಿ ಕಚೇರಿಗಳು ಬರುತ್ತವೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಸರ್ಕಾರ ನೇಕಾರರ ಬೆಂಬಲಕ್ಕಿದೆ, ಹೆದರುವ ಅವಶ್ಯಕತೆ ಇಲ್ಲ: ಶ್ರೀಮಂತ ಪಾಟೀಲ - Minister Shreemanth patil
ನೇಕಾರರಿಗೆ ನೆರವಾಗಲು ಈಗಾಗಲೇ ಕಾಗವಾಡದಲ್ಲಿ ಕೆಲ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಕೊರೊನಾದಿಂದಾಗಿ ಕೊಂಚ ನಿಧಾನವಾದರೂ ಆದಷ್ಟು ಬೇಗ ಕಾಗವಾಡ ತಾಲೂಕಿಗೂ ಸರ್ಕಾರಿ ಕಚೇರಿಗಳು ಬರುತ್ತವೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಪಂಚಾಯತ್ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಕರ್ನಾಟಕದಲ್ಲಿ ಒಂದು ಲಕ್ಷದ ಐವತ್ತು ಸಾವಿರ ನೇಕಾರರಿಗೆ ಈಗಾಗಲೇ ಎರಡು ಲಕ್ಷ ರೂ. ಸಹಾಯಧನ ಬಿಡುಗಡೆ ಮಾಡಲಾಗಿದೆ. ಯಾರೂ ಆತ್ಮಹತ್ಯೆ ಪ್ರಯತ್ನಕ್ಕೆ ಮುಂದಾಗಬೇಡಿ. ನಿಮ್ಮ ಜೊತೆ ಸರ್ಕಾರ ಇದೆ. ಸರ್ಕಾರ 50 ಲಕ್ಷ ನೇಕಾರರ ಸೀರೆಗಳನ್ನು ಖರೀದಿ ಮಾಡಲು ಮುಂದಾಗಿದೆ. ನೇಕಾರರ ಸೀರೆಗಳನ್ನು ಖರೀದಿ ಮಾಡಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಸರ್ಕಾರದ ವಿವಿಧ ಇಲಾಖೆಯ ಸಿಬ್ಬಂದಿಗೆ ಕೊಡುಗೆ ರೂಪದಲ್ಲಿ ನೀಡಲಿದೆ ಎಂದರು.