ಚಿಕ್ಕೋಡಿ: ಕೊರೊನಾ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲಿರುವ ಹಿನ್ನಲೆಯಲ್ಲಿ ಕರ್ನಾಟಕ - ಮಹಾರಾಷ್ಟ್ರದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಾಗವಾಡ ಪಟ್ಟಣದಲ್ಲಿ ಚೆಕ್ ಪೊಸ್ಟ್ ನಿರ್ಮಿಸಿದ್ದು, ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶಿಸಬೇಕಾದರೆ ಕೊರೊನಾ ನೆಗಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಇದರ ಜೊತೆಗೆ ಮಹಾರಾಷ್ಟ್ರಕ್ಕೆ ತೆರಳುವ ಕರ್ನಾಟಕ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿದ ಹಿನ್ನೆ ಲೆಯಲ್ಲಿ ಗಡಿ ಭಾಗದ ಜನರು ತೊಂದರೆ ಅನುಭವಿಸುವಂತ ಪ್ರಸಂಗ ಎದುರಾಗಿದೆ.
ಬಸ್ ವ್ಯವಸ್ಥೆಯಿಲ್ಲದೆ ತೀವ್ರ ತೊಂದರೆಗೊಳಗಾದ ಗಡಿ ಜನತೆ ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ರಾಯಬಾಗ ತಾಲೂಕಿನಲ್ಲಿ ಸರಿಯಾದ ಆಸ್ಪತ್ರೆಗಳು ಇಲ್ಲದೇ ಇರುವುದರಿಂದ ಮಹಾರಾಷ್ಟ್ರದ ಆಸ್ಪತ್ರೆಗಳಿಗೆ ಅವಲಂಬಿತವಾಗಿದ್ದು, ಸದ್ಯ ಕರ್ನಾಟಕ - ಮಹಾರಾಷ್ಟ್ರ ಸಂಚಾರ ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ಗಡಿ ಭಾಗದ ಜನರು ಪರದಾಡುತ್ತಿದ್ದಾರೆ. ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ಖಾಸಗಿ ವಾಹನ ಚಾಲಕರು ಚೆಕ್ ಪೊಸ್ಟ್ ಬಿಟ್ಟು ದೂರದಲ್ಲಿ ಪ್ರಾಯಾಣಿಕರನ್ನು ಬಿಟ್ಟು ಹೊಗುತ್ತಿದ್ದು ಕಾಗವಾಡ ಆರ್‌ಟಿಓ ಚೆಕ್‌ಪೊಸ್ಟ್‌ದಿಂದ ಕಾಗವಾಡ ಬಸ್ ನಿಲ್ದಾಣವರೆಗೆ ಕಾಲ್ನಡಿಗೆ ಮೂಲಕ ಹೋಗಿ ಕಾಗವಾಡ ಬಸ್ ತಂಗುದಾಣದಿಂದ ತಮ್ಮ ಗ್ರಾಮಗಳಿಗೆ ತೆರಳುವಂತ ಪ್ರಸಂಗ ಎದುರಾಗಿದೆ.
ಬಸ್ ಸೇವೆಯಿಲ್ಲದೆ ಕಾಲುನಡಿಗೆಯಲ್ಲಿ ಪ್ರಯಾಣಿಸುತ್ತಿರುವ ಜನರು ಈ ವಿಚಾರವಾಗಿ ಕೆಎಸ್‍ಆರ್‌ಟಿಸಿ ಕಾಗವಾಡ ವಿಭಾಗದ ನಿಯಂತ್ರಾಣಾಧಿಕಾರಿ ಚಂದ್ರಶೇಖರ ಬೇನಾಳ ಮಾತನಾಡಿ ,ಮಧ್ಯಾಹ್ನ ನಮ್ಮ ಕೆಎಸ್‍ಆರ್‌ಟಿಸಿ ಇಲಾಖೆ ಅಧಿಕಾರಿಗಳ ಸೂಚನೆ ಮೇರಿಗೆ ಮಹಾರಾಷ್ಟ್ರಕ್ಕೆ ಸಂಚರಿಸುವ ಎಲ್ಲಾ ಬಸ್‌ಗಳನ್ನು ಸ್ಥಗಿತಗೊಳಿಸಿದ್ದೇವೆ. ಕೆಲವರು ಗಡಿ ವಿವಾದ ಎಂದರು. ಆದರೆ, ಕೆಲ ಅಧಿಕಾರಿಗಳು ಕೋವಿಡ್ ತಪಾಸಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಬಸ್ ಸಂಚರಿಸಲು ನಿರ್ಬಂಧ ಹೇರಿದ್ದಾರೆ. ದಿನನಿತ್ಯ ಅನೇಕ ಬಸ್‍ಗಳು ಸಂಚರಿಸುತ್ತವೆ. ಈ ಎಲ್ಲಾ ಬಸ್‍ಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಆಕಸ್ಮಿಕವಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಎಲ್ಲಾ ಖಾಸಗಿ ವಾಹನ ಮಾಲೀಕರು ಪ್ರಯಾಣಿಕರಿಂದ ಮನ ಬಂದಂತೆ ಹಣ ವಸೂಲಿ ಮಾಡುತ್ತಿದ್ದು ಕಂಡುಬಂತು. ಕೊರೊನಾ ಹೆಚ್ಚಳವಾದ್ದರಿಂದ ಮಹಾರಾಷ್ಟ್ರದ ಕೆಲವು ಖಾಸಗಿ ವಾಹನಗಳು ಗಡಿಯವರೆಗೆ ಮಾತ್ರ ಬಂದು ಪ್ರಯಾಣಿಕರನ್ನ ಇಳಿಸುತ್ತಿವೆ. ಅಲ್ಲಿಂದ ಕಾಗವಾಡ ಬಸ್ ನಿಲ್ದಾಣದವರೆಗೂ ಸುಮಾರು ಮೂರು ಕಿ.ಮೀ ಕಾಲುನಡಿಗೆಯಲ್ಲೇ ಪ್ರಯಾಣಿಕರು ಬರುವ ಸ್ಥಿತಿ ಉಂಟಾಗಿದ್ದು, ಇದರಿಂದ ಗಡಿ ಭಾಗದ ಜನರು ತೊಂದರೆ ಅನುಭವಿಸುವಂತ ಪ್ರಸಂಗ ಎದುರಾಗಿದೆ.